Close X

“ಬಂಗಾರಿ” ರಾಗಿಣಿಯ ಚಿತ್ರೀಕರಣ ನಂದಿಬೆಟ್ಟದಲ್ಲಿ

Ragini-dwivediಕನ್ನಡದ ಬಂಗಾರಿ ರಾಗಿಣಿ ದ್ವಿವೇದಿ ಯುವ ನಟ ಲೂಸ್ ಮಾದ ಯೋಗೇಶ್ ನೊಂದಿಗೆ “ಬಂಗಾರಿ” ಚಿತ್ರದೊಂದಿಗೆ ಯುವ ನಟರಿಗೆ ನಾಯಕಿಯಾಗಿದ್ದಾರೆ. ಚಿಕ್ಕಬಳ್ಳಾಪುರ ನಂದಿಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಚಿತ್ರದ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣವನ್ನು ನಡೆಸಲಾಯಿತು.

ಇಲ್ಲಿನ ಚಿತ್ರೀಕರಣದೊಂದಿಗೆ ಮಾ. ಚಂದ್ರುರವರ “ಬಂಗಾರಿ” 60% ಚಿತ್ರೀಕರಣವನ್ನು ಮುಗಿಸಿದೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಮಾ. ಚಂದ್ರೂರವರೆ ಬರೆದಿದ್ದಾರೆ, ಎ. ಆರ್ ರೆಹಮಾನ್‌ರ ಛಾಯಾಗ್ರಹಣ, ಎ. ಎಂ. ನೀಲ್‌ರ ಸಂಗೀತ, ಇಮ್ರಾನ್ ಸರ್ದಾನಿಯಾ, ಮಾಲೂರು ಶ್ರೀನಿವಾಸ್ ಮತ್ತು ಕಂಬಿ ರಾಜು ಚಿತ್ರದ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಫೈಟ್ ಮಾಸ್ಟರ್ ಮಾಸ್ ಮಾಧ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ.

[ad_468x60]

ದೇವಸ್ಥಾನದ ಹೊರಗಡೆ ಫೈಟ್ ದೃಶ್ಯಗಳನ್ನು ನಡೆಸಲಾಯಿತು. ಬಲವಂತವಾಗಿ ಬಂಗಾರಿಯನ್ನು ಅಂದರೆ ರಾಗಿಣಿಯನ್ನು ಎಳೆದೊಯ್ಯುವ ದೃಶ್ಯವನ್ನು ನಡೆಸಲಾಯಿತು.

ಸಾಧುಕೋಕಿಲ, ದಂಡಪಾಣಿ, ಸುಮನ್ ಶೆಟ್ಟಿ, ರಮೇಶ್ ಭಟ್, ಸ್ವಯಂವರ ಚಂದ್ರು, ಸತ್ಯಪ್ರಿಯ, ಶರತ್ ಲೋಹಿತಾಶ್ಚ್ವ, ಗಣೇಶ್ ರಾಂ, ವೆಂಕಟೇಶ್ ಪ್ರಸಾದ್ ಮುಂತಾದವರೂ ಚಿತ್ರದ ಭೂಮಿಕೆಯಲ್ಲಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech