Close X

ಬೇಗ ಬಾ ಯುವರಾಜ್ ಸಿಂಗ್ (ಯುವಿ)

ಅವನ್ನೊಬ್ಬ ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮವಾದ ಆಲ್ ರೌಂಡರ್. ಅವನದು ಹದ್ದಿನ ಕಣ್ಣುಗಳು ! ಅವನ ರಕ್ಷಣೆಯನ್ನು ಮೀರಿಸಿ ಬಾಲ್ ದಾಟಿಸುವುದಕ್ಕೆ ಪ್ರಪಂಚದ ದಿಗ್ಗಚ ಬ್ಯಾಟ್ಸ್ ಮ್ಯಾನ್ ಗಳೇ ಕಷ್ಟ ಪಡುತ್ತಿದ್ದರು. ಅಂತ ಶ್ರೇಷ್ಠ ಫಿಲ್ದರ್ ಅವನು ! ಒಮ್ಮೆ ಇಂಗ್ಲೆಂಡ್ ತಂಡದ ಆಗಿನ ನಾಯಕ ಕೆವಿನ್ ಪಿಟರ್ಸನ್ ಆ ಎಡಗೈ ದಾಂಡಿಗನ ಬೌಲಿಂಗ್ ಬಗ್ಗೆ ಕೊಂಕು ಮಾತುಗಳನ್ನು ಆಡಿದ್ದರು ಆದಕ್ಕೆ ಆ ಎಡಗೈ ದಾಂಡಿಗನ ಸರಿಯಾದ ಉತ್ತರವನ್ನು ನೀಡಿದ ಕೆವಿನ್ ಪಿಟರ್ಸನ್ ನನ್ನು ಬೌಲ್ಡ್ ಮಾಡಿದ !

ಭಾರತ ಇಂಗ್ಲೆಂಡ್ ಪ್ರವಾಸ 2002 !

ಇಂಗ್ಲೆಂಡ್ ಹಾಗೂ ಭಾರತ ಎರಡು ಪಂದ್ಯಗಳಲ್ಲಿ ಗೆದ್ದು ಸಮಬಲ ಸಾದಿಸಿತ್ತು ! ಇಂಗ್ಲೆಂಡ್ ಮತ್ತು ಭಾರತದ 5 ಪಂದ್ಯದ ಸರಣಿಯ ಕಡೆಯ ಪಂದ್ಯ. ಎರಡೂ ತಂಡಕ್ಕೂ ಅದು ಮಾಡು ಇಲ್ಲವೇ ಮಡಿ ಆಟ ! ಭಾರತ ವಿದೇಶಿನೆಲದಲ್ಲಿ ಸರಣಿ ಗೆಲ್ಲುವುದು ಅಪರೂಪ ಆಗಿತ್ತು. ಭಾರತವನ್ನು ಬಗ್ಗಿಸಲೇ ಬೇಕು ಎಂದು ಇಂಗ್ಲೆಂಡ್ ತಂಡ ತುಂಬಾ ಉತ್ತಮವಾದ ಆಟವನ್ನೇ ಆಡಿತ್ತು. ಇಂಗ್ಲೆಂಡ್ 325/5 50 ಓವರ್ ಗಳಲ್ಲಿ ಗಳಿಸಿತ್ತು. ಭಾರತಕ್ಕೆ ಅದು ಕಷ್ಟದ ಸವಾಲೇ ಆಗಿತ್ತು ! ಭಾರತದ ಆಟವೂ ಸಹ ಆದೆ ರೋಷದಿಂದ ಕೂಡಿತ್ತು.
ಅಲ್ಲಿ ಮೊಹಮದ್ ಕೈಫ್ ಗೆ ಬೆಂಬಲವಾಗಿ ನಿಂತಿದ್ದು ಆದೆ ಆಟಗಾರ ! ಭಾರತ ಆ ಪಂದ್ಯದಲ್ಲಿ ಗೆದ್ದು ಆಂಗ್ಲರಿಗೆ ಒಳ್ಳೆಯ ಮುಖಬಂಗ ಮಾಡಿದರು ! ಭಾರತ 326/8 49.3 ಓವರ್ ಗಳಲ್ಲಿ ಜಯ ಸಾಧಿಸಿತು. (8ವಿಕೆಟ್ ನಷ್ಟಕ್ಕೆ ಇನ್ನೂ ಮೂರು ಬಾಲ್ ಇರುವಾಗಲೇ ಭಾರತ ಗೆಲುವಿನ ನಗೆಯ ಬಿರಿತು).

ಮೊದಲ ಇಪ್ಪತ್ತು ಓವರ್ ಗಳ ವಿಶ್ವ ಕಪ್

Yuvraj Singh Wallpapersಭಾರತದ ಪಾಲಿಗೆ ಆ ವಿಶ್ವ ಕಪ್ ತುಂಬಾ ಪ್ರಾಮುಖ್ಯತೆಯಿಂದ ಕೂಡಿತ್ತು, ಕಾರಣ ಹಿಂದಿನ ಏಕದಿನ ವಿಶ್ವ ಕಪ್ ನಲ್ಲಿ ಭಾರತ ತೀರ ಕಳಪೆ ಪ್ರದರ್ಶನ ನೀಡಿ ಮೊದಲ ಸುತ್ತಿನಲ್ಲೇ ಹೊರಬಿದಿತ್ತು ! T20 ವಿಶ್ವ ಕಪ್ ನಲ್ಲಿ ಭಾರತಕ್ಕೆ ಒಂದು ಮಾಡು ಇಲ್ಲವೇ ಮಡಿ ಪಂದ್ಯ ! ಅದು ಇಂಗ್ಲೆಂಡ್ ವಿರುದ್ಧ ಗೆಲ್ಲಬೇಕು ಅದು ಅಲ್ಲದೆ ರನ್ ಸರಾಸರಿಯಲ್ಲಿ
ತುಂಬಾ ಅಂತರ ಇರಬೇಕು ! ಅಂತಹ ಪಂದ್ಯದಲ್ಲಿ ಭಾರತದ ಆರಂಭಿಕರು, ಸೆಹ್ವಾಗ್ ಮತ್ತು ಗಂಭೀರ್ ಉತ್ತಮ ಆರಂಭವನ್ನೇ ನೀಡಿದರು ! ಕೆಳ ಕ್ರಮಾಂಕದಲ್ಲಿ ಆಡಲು ಬಂದ ಈ ಎಡಗೈ ದಾಂಡಿಗ ಪಂದ್ಯವನ್ನು ನಮ್ಮ ಹಿಡಿತ ತಪ್ಪುತ್ತಿದೆ ಎಂದು ಆಂಗ್ಲರು ಸುಮ್ಮನೆ ಕೆಣಕುವ ತಂತ್ರವನ್ನು ಉಪಯೋಗಿಸಲು ಪ್ರಾರಂಭಿಸಿದರು ! ಆಗ ಇಂಗ್ಲೆಂಡ್ ನ ಹೆಸರಾಂತ ಬೌಲರ್ Flintoff ಭಾರತದ ಈ ಎಡಗೈ ದಾಂಡಿಗನನ್ನು ಕೆಣಕಿಯೇ ಬಿಟ್ಟ. ಮೊದಲೇ ಆರ್ಭಾಟಿಸಲೆಬೇಕು ಎಂದು ಬಂದವನಿಗೆ ಬೆಂಕಿಯ ಕಿಚ್ಚು ಹಚ್ಚಿ ಬಿಟ್ಟರು ಆಂಗ್ಲರು !
ನಂತರ ನಡೆದದ್ದು ಕ್ರಿಕಟ್ ಇತಿಹಾಸದಲ್ಲಿ ಎಂದೂ ಮರೆಯಲಾಗದ ಘಟನೆ! ಇಂಗ್ಲೆಂಡ್ ನ ಬೌಲರ್ ಬೋರ್ಡ್ ನ ಪ್ರತಿಯೊಂದು ಎಸತವನ್ನೂ ಸಿಕ್ಷ್ ಸಿಕ್ಷ್ ಸಿಕ್ಷ್ ಸಿಕ್ಷ್ ಸಿಕ್ಷ್ ಸಿಕ್ಷ್ !

ಈ ಎಡಗೈ ದಾಂಡಿಗ ಆಂಗ್ಲರಿಗೆ ತಕ್ಕ ಉತ್ತರವನ್ನೇ ನೀಡಿದ ತನ್ನ ಬ್ಯಾಟ್ ಮೂಲಕ ! ಕೊನೆಯ ಪಂದ್ಯದಲ್ಲಿ ನಮ್ಮ ವೈರಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಮೊದಲ t20 2007 ವಿಶ್ವ ಕಪ್ ತನ್ನ ಹೆಸರನ್ನು ಬರೆದೆ ಬಿಟ್ಟಿತು !

ಭಾರತಕ್ಕೆ ಮತ್ತೊಂದು ಅದ್ಭುತವಾದ ಅವಕಾಶ 28ವರುಷಗಳ ನಂತರ ಏಕದಿನ ವಿಶ್ವ ಕಪ್ ಗೆಲ್ಲುವುದಕ್ಕೆ. ಈ ಸಲ ನಮ್ಮ ಭಾರತದಲ್ಲೇ ವಿಶ್ವ ಕಪ್ ನಡೆಯುವ
ಸಂಭ್ರಮದಲ್ಲಿ ಭಾರತದ ಕ್ರಿಕಟ್ ಪ್ರೇಮಿಗಳು ! ಅಲ್ಲಿ ಮತ್ತೊಮ್ಮೆ ಭಾರತದ ಎಡಗೈ ದಾಂಡಿಗನೆ ಹೀರೋ ಆದ !

ಅವನ ಮಾತುಗಳನ್ನು ಕೇಳಿ!

ನಾನು ಈ ವಿಶ್ವ ಕಪ್ ಅನ್ನು ಮೂರ ಜನಕ್ಕಾಗಿ ಆಡುತ್ತಿದ್ದೇನೆ ಮೊದಲು ನನ್ನ ತಾಯಿ. ನನ್ನ ಗುರು, ಹಾಗೂ ಸಚಿನ್ ! ತನ್ನ ಮಾತಿನಂತೆ ಪ್ರತಿಯೊಂದು ಪಂದ್ಯದಲ್ಲೂ ಅದ್ಭುತವಾದ ಆಟವನ್ನೇ ಪ್ರದರ್ಶಿಸಿದ. ಅವನ ಹೋರಾಟದ ಒಂದು ಜಲಕ್ ಅಂದರೆ ಅದು ಭಾರತ ಮತ್ತು ಆಸ್ಟ್ರೇಲಿಯಾದ ಪಂದ್ಯ ! ಭಾರತದ ಪಾಲಿಗೆ ಆಸ್ಟ್ರೇಲಿಯಾ ವಿಶ್ವ ಕಪ್ ಪಂದ್ಯದಗಳಲ್ಲಿ ಕಬ್ಬಿಣದ ಕಡಲೆ ಆಗಿತ್ತು ! ಅವರನ್ನು ಸೋಲಿಸಿ ಮುಂದೆ ಹೋಗುವುದು ಭಾರತದ ಪಾಲಿಗೆ ತುಂಬಾ ಕಷ್ಟ ಕೆಲಸವಾಗಿತ್ತು ! ಆಸ್ಟ್ರೇಲಿಯಾದ ಆಟಗಾರರು ತಮ್ಮೆಲ್ಲ ಶಕ್ತಿಯನ್ನೂ ಪಣಕ್ಕೆ ಇಡುತ್ತಿದ್ದರು ! ಅಲ್ಲಿ ಈ ಎಡಗೈ ದಾಂಡಿಗ ರಣರಂಗದಲ್ಲಿ ಹೋರಾಡುವ ಒಂದು ವೀರನಂತೆ ಹೋರಾಡಿದ. ಆಸ್ಟ್ರೇಲಿಯಾದ ಅಷ್ಟೂ ಸೈನಿಕರನ್ನೂ ಹೊಡೆದುರುಳಿಸಿದ. ತನ್ನ ಒಳಗೆ ಆಗಲೇ ಸಯಿಸಲಾಗದ ನೋವು ಇದ್ದರೂ ಭಾರತದ ಗೆಲುವಿಗಾಗಿ ಆ ನೋವಿನಲ್ಲೇ ಹೋರಾಡಿ ಭಾರತಕ್ಕೆ ಗೆಲುವು ತಂದು ಕೊಟ್ಟು. ಭಾರತಾಂಬೆಯ 28ವರುಷಗಳ ನಂತರ
ಏಕದಿನ ವಿಶ್ವ ಕಪ್ ಅನ್ನು ಮುಡಿಗೆರಿಸಿಯೇ ಬಿಟ್ಟ. ಸರಣಿ ಶ್ರೇಷ್ಠ ಪ್ರದರ್ಶನವನ್ನೂ ನೀಡಿದ ! ಈ ಅದ್ಭುತ ಆಟಗಾರ ನಮ್ಮ ಕ್ರಿಕಟ್ ರಾಜ್ಯಕ್ಕೆ ಯುವರಾಜ. ನಮ್ಮೆಲ್ಲರ ಪ್ರೀತಿಯ ಯುವರಾಜ್ ಸಿಂಗ್ !

ಹೌದು ನಾನು ಹೇಳುತ್ತಿದ್ದ ಆ ಅದ್ಭುತವಾದ ಆಟಗಾರನೆ ಯುವಿ ! ಇಂದು ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರು ಬೇಗ ಗುಣಮುಖರಾಗಿ ಬರಲಿ
ಹಾಗೂ ಮತ್ತೊಮ್ಮೆ ಯುವರಾಜ್ ಬ್ಯಾಟ್ ನಿಂದ ಸಿಕ್ಸರ್ ಗಳ ಸುರಿ ಮಳೆ ಆಗಲಿ ಎಂದು ಎಲ್ಲರೂ ಹಾರೈಸೋಣ !

ಬೇಗ ಬಾ ಯುವಿ ……………..

ಬರೆದವರು : ಪ್ರಕಾಶ್ ಶ್ರೀನಿವಾಸ್. (Facebook Profile: https://www.facebook.com/kavithe)

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech