Close X

ವಿಭಿನ್ನ ರೀತಿಯ ಅಲೆಮಾರಿ ಚಿತ್ರದ ಆಡಿಯೋ ಬಿಡುಗಡೆ

alemari_kannada_movie_stills - audio releaseನಿನ್ನೆ ಭಾನುವಾರ ಬೆಂಗಳೂರಿನ ಗಾಯತ್ರಿ ವಿಹಾರ್ ಅರಮನೆಯಲ್ಲಿ ಅಲೆಮಾರಿ ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭ ಜರುಗಿತು. ಇದೊಂದು ವಿಭಿನ್ನ ರೀತಿಯ ಧ್ವನಿಸುರಳಿ ಬಿಡುಗಡೆ ಸಮಾರಂಭವಾಗಿತ್ತು. ನಿರ್ಮಾಪಕ ಬಿ. ಕೆ. ಶ್ರೀನಿವಾಸ್ ಹೊಸದೊಂದು ರೀತಿಯ ಧ್ವನಿಸುರಳಿ ಬಿಡುಗಡೆಯನ್ನು ಆರಂಭಿಸಿದ್ದಾರೆ. ಇಬ್ಬರು ರಾಜ್ಯ ಪ್ರಶಸ್ತಿ ವಿಜೇತರು – ಯೋಗೀಶ್ ಮತ್ತು ರಾಧಿಕಾ ಪಂಡಿತ್ ಚಿತ್ರದ ಮುಖ್ಯಭೂಮಿಕೆಯನ್ನು ನಿಭಾಯಿಸುತ್ತಿದ್ದಾರೆ.

ಅಶ್ವಿನಿ ಮೀಡಿಯಾ ನೆಟವರ್ಕ್ – “ಅಲೆಮಾರಿ” ಚಿತ್ರದ ಧ್ವನಿಸುರಳಿಯನ್ನು ತಯಾರಿಸಿದ್ದು, ಇದರ ಜೊತೆಗೆ 1 ನಿಮಿಷದ ಚಿತ್ರದ ತುಣುಕು ಮತ್ತು 15 ನಿಮಿಷದ ಅಲೆಮಾರಿ ಚಿತ್ರದ ತಯಾರಿಕೆಯನ್ನು ಒಳಗೊಂಡಿದೆ.

ಆಡಿಯೋ ಉದ್ಯಮದಲ್ಲೇ ಮೊದಲ ಬಾರಿಗೆ ಹಾಡುಗಳು, ತುಣುಕು ಮತ್ತು ಚಿತ್ರದ ತಯಾರಿಕೆಯನ್ನು ಅಲೆಮಾರಿ ಚಿತ್ರದ ಧ್ವನಿಸುರಳಿ ಒಳಗೊಂಡಿದೆ.

ಚಿತ್ರದ 5 ಹಾಡುಗಳನ್ನು ಒಂದರ ನಂತರ ಒಂದರಂತೆ ಬಿಡುಗಡೆಗೊಳಿಸಲಾಯಿತು. 1 ಗಂಟೆಗಳ ಈ ಕಾರ್ಯಕ್ರಮವು ದೊಡ್ಡ ಸಂಗೀತ ನಿರ್ಸೇಶಕರಾದ ಹಂಸಲೇಖ, ಗುರುಕಿರಣ್, ವಿ. ಮನೋಹರ್‌ರವರುಗಳನ್ನು ಒಳಗೊಂಡಿತ್ತು.

ನೂರು ಚಿತ್ರಗಳ ಸರದಾರ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಲೈನ್ ವೆಂಕಟೇಶ್ ಮುಂತಾದವರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅಲೆಮಾರಿ ಚಿತ್ರವನ್ನು ಚೊಚ್ಚಲ ನಿರ್ದೇಶಕ ಸಂತು ಅವರು ನಿರ್ದೇಶಿಸುತ್ತಿದ್ದು, ಬೆ. ಕೆ. ಶ್ರೀನಿವಾಸ್ ಚಿತ್ರದ ನಿರ್ಮಾಪಕರಾಗಿದ್ದಾರೆ. ನಿರ್ದೇಶಕ ಸಂತು ಸ್ವತಃ ಕಥೆ, ಚಿತ್ರಕಥೆ, ಹಾಡುಗಳನ್ನು ಬರೆದಿದ್ದಾರೆ. ಅರ್ಜುನ್ ಜನ್ಯ ಚಿತ್ರದ ಸಂಗೀತ ನೀಡಿದ್ದು, ಮಂಜುನಾಥ್ ನಾಯಕ್ ಕ್ಯಾಮರಾ ಕೈಚಳಕವನ್ನು ತೊರಲಿದ್ದಾರೆ.

ನೀವು ಅಲೆಮಾರಿ ಚಿತ್ರದ ಧ್ವನಿಸುರಳಿಯನ್ನು ಕೊಳ್ಳಿ ಉತ್ತಮ ಸಂಗೀತವಿರುವ ಹಾಡುಗಳನ್ನು ಕೇಳಿ ಆನಂಧಿಸಿ. ಇದರ ಜೊತೆಗೆ, ಚಿತ್ರದ ತಯಾರಿಕೆಯ ಮಜವನ್ನು ಸವಿಯಿರಿ. :) :)

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech