Close X

ಬಿಎಂಟಿಸಿ ವೋಲ್ವೋನಲ್ಲಿ ಸಾಫ್ಟವೇರ್ ಟೆಕ್ಕಿಯ ಕಳ್ಳತನ !!!

volvo internetಇದೇನು ವಿಚಿತ್ರ ನೋಡಿ. ಸಾಫ್ಟವೇರ್ ಕಂಪೆನಿಗಳಲ್ಲಿ ಕೈತುಂಬಾ ಹಣಕೊಟ್ಟರೂ ಸಾಕಾಗುತ್ತಿಲ್ಲ. ಈ ಯುವಕನಿಗೆ ಬಿಎಂಟಿಸಿ ವೋಲ್ವೋನಲ್ಲಿರುವ ಗ್ಯಾಡ್ಜೆಟ್‌ಗಳ ಕಳ್ಳತನಕ್ಕೆ ಮುಂದಾಗಿದ್ದಾನೆ. 25 ವರ್ಷದ ಸಾಗರ್ ರೆಡ್ಡಿ ವೋಲ್ವೋ ಬಸ್ ನಲ್ಲಿರುವ LCD Monitor ಗಳನ್ನು ಕದ್ದ ಆರೋಪಕ್ಕೆ ಬಂಧಿಸಲಾಗಿದೆ.

Electronic city ಯಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದ ಬಿಎಂಟಿಸಿ ವೋಲ್ವೋ ಬಸ್, ಒಂದು ಆಶ್ಚರ್ಯಕ್ಕೆ ಕಾರಣವಾಯಿತು. ಬಸ್ ಕಂಡಕ್ಟರ್ LCD ಫಲಕಗಳು ಕಾಣೆಯಾಗಿದ್ದವು. :( ತಕ್ಷಣವೇ ಎಚ್ಚೆತ್ತುಕೊಂಡ ನಿರ್ವಾಹಕ (ಕಂಡಕ್ಟರ್) ಬಾಗಿಲನ್ನು ಮುಚ್ಚುವಂತೆ ಚಾಲಕನಿಗೆ ಹೇಳಿ ಎಲ್ಲರ ತಪಾಸಣೆಗೆ ತೊಡಗಿದ. ತಪಾಸಣೆಯ ಸಮಯದಲ್ಲಿ ಸಾಗರ್ ಸಿಕ್ಕಿಬಿದ್ದು, ಸ್ಥಳೀಯ ಪೋಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಪೋಲೀಸರ ಮುಂದೆ ಅಂಗಲಾಚಿ ಬೇಡುತ್ತಾ ನಿಂತ ಸಾಗರ್ – “ಸಾರ್ ಯಾವುದೇ ಕೇಸ್ ಹಾಕಬೇಡಿ. ನನ್ನ ಕೆರೆಯರ್ ಹಾಳಾಗುತ್ತೆ. ಎಷ್ಟು ದಂಡ ಬೇಕಾದ್ರೂ ಕಟ್ಟುತ್ತೇನೆ” ಎಂದು ಬೇಡಿದ. ಕಳೆದ ಐದು ದಿನಗಳಲ್ಲಿ ಸುಮಾರು ಅರ್ಧ ಡಜನ್ ಗ್ಯಾಡ್ಜೆಟ್ಸ್ ಗಳನ್ನು ಕಳೆದುಕೊಂಡ ವೋಲ್ವೋ ಬಸ್ ಸಿಬ್ಬಂದಿ ಈ ಬಗ್ಗೆ ದೂರು ನೀಡಿದ್ದರು. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಈ ಸಾಗರ್ ಬಾಗ್ಮನೆ ಟೆಕ್ ಪಾರ್ಕನ ಒಂದು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಕಂಪನಿಯೊಂದಕ್ಕೆ ಸಂದರ್ಶನಕ್ಕೆ ಹೋಗಿ ಬರುವಾಗ ಈ ಕೃತ್ಯ ಎಸೆಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech