Close X

ಮಲಯಾಳಂನ Salt n Pepper ಚಿತ್ರವನ್ನು ಪ್ರಕಾಶ್ ರೈ ರೀಮೇಕ್ ಮಾಡಲಿದ್ದಾರಂತೆ

prakash-raj-remakes-salt-and-pepper-movie

ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಗೆದ್ದ ಪ್ರಕಾಶ್ ರೈ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ. ಈಗ ಮಲಯಾಳಂ ಚಿತ್ರವೊಂದನ್ನು ರೀಮೇಕ್ ಮಾಡುವ ಸುದ್ಧಿ. 2011 ರ ಮಲಯಾಳಂನ ಹಿಟ್ ಚಿತ್ರ “Salt n Pepper” ಚಿತ್ರವನ್ನು ರೀಮೇಕ್ ಮಾಡುವ ಸುದ್ಧಿ. ಚಿತ್ರವನ್ನು ತೆಲುಗು, ತಮಿಳು, ಹಿಂದಿ ಮತ್ತು ಕನ್ನಡ ಭಾಷೆಗಳಿಗೆ ರೀಮೇಕ್ ಮಾಡುವ ಎಲ್ಲಾ ಹಕ್ಕುಗಳನ್ನು ಪಡೆದಿದ್ದಾರಂತೆ.

“Salt n Pepper” ಎಂಬುದು ಕರ್ನಾಟಕದಲ್ಲಿ ಚಿತ್ರ ತಯಾರಿಸುವ ಬ್ಯಾನರ್ ಆಗಿದ್ದು, ಈ ಬ್ಯಾನರ್ ಅಡಿಯಲ್ಲಿ ಗಿನ್ನಿಸ್ ದಾಖಲೆ ಬರೆದ ಮಾಸ್ಟರ್ ಕಿಶನ್ (ತನ್ನ ಒಂಬತ್ತನೇ ವಯಸ್ಸಿನಲ್ಲಿ “Care of Footpath” ಚಿತ್ರವನ್ನು ನಿರ್ದೇಶಿಸಿದ) “ಟೀನೇಜ್… ಈ ವಯಸ್ಸೆ ಒಂತರ” ಚಿತ್ರವನ್ನು ನಿರ್ದೇಶಿಸುತ್ತಿದ್ದಾನೆ. ಈ ಚಿತ್ರ ಇನ್ನೂ ತಯಾರಿಕೆಯಲ್ಲಿದೆ.

ಈ ಮೊದಲು ಪ್ರಕಾಶ್ ರೈ ಜಂಟಿಯಾಗಿ ಕನ್ನಡದಲ್ಲಿ “ನಾನೂ ನನ್ನ ಕನಸು” ಮತ್ತು “ಪುಟ್ಟಕ್ಕನ ಹೈವೇ” ಎಂಬ ಚಿತ್ರಗಳನ್ನು ತಯಾರಿಸಿದ್ದರು. ನಾನು ನನ್ನ ಕನಸು ಭರ್ಜರಿ ಯಶಸ್ಸು ಕಂಡರೆ, ಪುಟ್ಟಕ್ಕನ ಹೈವೇ ಚಿತ್ರವೂ ಕೆಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿತು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech