Close X

ಕರ್ನಾಟಕ ಬುಲ್ಡೋಜರ್ಸ್ CCL T20 season 2ನ ಸೆಮಿಫೈನಲ್ ಪ್ರವೇಶಿಸಿದೆ

ccl-kb-winಮಲಯಾಳಂನ ಮೆಗಾ ಸ್ಟಾರ್‍ ಮೋಹನ್ ಲಾಲ್ ನೇತೃತ್ವದ ಕೇರಳ ಸ್ಟೈಕರ್ಸ್ ತಂಡ ನೆನ್ನೆ ಭಾನುವಾರ ಫೆಬ್ರವರಿ 5ರಂದು ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದೆದುರು ವೈಜಾಕ್ ನಲ್ಲಿ ಸೆಮಿಫೈನಲ್ ಜಾಗಕ್ಕೆ ಸೆಣಸಲಾಯಿತು. ಈ ಪಂದ್ಯ ಎರಡೂ ತಂಡಗಳಿಗೆ ಬಹು ಮುಖ್ಯದವಾದ ಪಂದ್ಯವಾಗಿತ್ತು. ಇವರೆಡು ತಂಡಗಳಲ್ಲಿ ಯಾರೇ ಗೆದ್ದರು CCL T20 season 2ನ ಸೆಮಿಫೈನಲ್ ಪ್ರವೇಶಿಸುತ್ತದೆ.

ಆದರೆ ಕೊನೆಯಲ್ಲಿ ನಮ್ಮ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೊಜರ್ಸಗಳು ಪಂದ್ಯದಲ್ಲಿ ಗೆದ್ದಿದ್ದಾರೆ ಮತ್ತು CCL T20 season 2ನಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ರಾಜೀವ್ ಮತ್ತು ಭಾಸ್ಕರ್ ಜೋಡಿ ಮತ್ತು ಬೌಲಿಂಗ್ ವಿಭಾಗದಲ್ಲಿ ಅಭಿಮನ್ಯು ಮತ್ತು ತರುಣ್ ಸುಧೀರ್ ಜೋಡಿಯು ಆಟದಲ್ಲಿ ಪ್ರಾಬಲ್ಯ ಮರೆದರು. ಮುಂಬೈ ಹೀರೋಸ್ ಬಂಗಾಳ ಟೈಗರ್ಸ್ ವಿರುದ್ಧ ಪಂದ್ಯದಲ್ಲಿ ಗೆದ್ದ ಸೆಮಿಫೈನಲ್ ಪ್ರವೇಶಿಸಿದೆ.ಮತ್ತೊಂದು ಪಂದ್ಯದಲ್ಲಿ ಚೆನೈ ರೈನೋಸ್ ತೆಲುಗು ವಾರಿಯರ್ಸ್‌ನ ಮೇಲೆ ಸೋತರು, ರನ್ ಸರಾಸರಿಯಲ್ಲಿ ಕೇರಳ ಟೈಗರ್ಸ್‍ಗಿಂತ ಮುಂದೆಯಿರುವುದರಿಂದ ಅದು ಕೂಡ ಸೆಮಿಫೈನಲ್ ಪ್ರವೇಶಿಸಿದೆ. ಇದರೊಂದಿಗೆ CCL T20 season 2 ನ ಎಲ್ಲಾ ಲೀಗ್ ಪಂದ್ಯಗಳು ಮುಗಿದಿದ್ದು, ತೆಲುಗು ವಾರಿಯರ್ಸ್, ಕರ್ನಾಟಕ ಬುಲ್ಡೋಜರ್ಸ್, ಮುಂಬೈ ಹೀರೋಸ್ ಮತ್ತು ಚೆನೈ ರೈನೋಸ್ ತಂಡಗಳು ಸೆಮಿಫೈನಲ್ ಪ್ರವೇಶಿಸಿದೆ.

CCL T20 2012 season 2 ಜನವರಿ 13 2012ರಂದು ಶುರುವಾಗಿದ್ದು, ಇದರಲ್ಲಿ ಮೊದಲ ಅವೃತ್ತಿಯ 4 ತಂಡಗಳ ಜೊತೆ – ಮತ್ತೆರಡು ತಂಡಗಳು ಸೇರಿಕೊಂಡಿತ್ತು. ಈ ಆವೃತ್ತಿಯಲ್ಲಿ ತೆಲುಗು ವಾರಿಯರ್ಸ್, ಕರ್ನಾಟಕ ಬುಲ್ಡೋಜರ್ಸ್, ಮುಂಬೈ ಹೀರೋಸ್, ಚೆನೈ ರೈನೋಸ್, ಕೇರಳ ಸ್ಟೈಕರ್ಸ್ ಮತ್ತು ಬೆಂಗಾಲ್ ಟೈಗರ್ಸ್. 11 ಫೆಬ್ರವರಿ 2012ರಂದು ಚೆನೈನ ಎಂ. ಎ. ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಸೆಮಿಫೈನಲ್ ಪಂದ್ಯ ಚೆನೈ ರೈನೋಸ್ ಮತ್ತು ತೆಲುಗು ವಾರಿಯರ್ಸ್ ವಿರುದ್ಧ ನಡೆಯಲಿದೆ.  ಹಾಗೂ ಎರಡನೇ ಸೆಮಿಫೈನಲ್ ಪಂದ್ಯ ಕರ್ನಾಟಕ ಬುಲ್ಡೋಜರ್ಸ್ ಮತ್ತು ಮುಂಬೈ ಹೀರೋಸ್ ವಿರ್ರುದ್ಧ ನಡೆಯಲಿದೆ. ಫೈನಲ್ ಪಂದ್ಯ ಫೆಬ್ರವರಿ 12 2012ರಂದು ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ.

CCL 2012 T20 Championship Team standings and Points Table.

Team P W T L A Pts NetRR
Telugu Warriors 5 4 1 0 0 9 1.060
Karnataka Bulldozers 5 3 0 2 0 6 2 .261
Mumbai Heroes 5 2 1 2 0 5 0.116
Chennai Rhinos 5 2 0 3 0 4 -0.307
Kerala Strikers 5 2 0 3 0 4 -1.699
Bengal Tigers 5 1 0 4 0 2 -1.533

ಇಲ್ಲಿದೆ ರಾಜೀವ್ ಬ್ಯಾಟಿಂಗ್‍ನ ಒಂದು ಜಲಕ್ :)

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech