Close X

ನಂಬಲಾರದ ವಿಷಯ….. ಹಾಸ್ಯ ನಟ ಕರಿಬಸವಯ್ಯ ಇನ್ನಿಲ್ಲ :(

karibasavaiah is deadನಂಬಲಾರದ ದುರದೃಷ್ಟಕರ ವಿಷಯ….. ಕನ್ನಡ ಚಿತ್ರರಂಗದ ಹಾಸ್ಯ ನಟ, ರಂಗಭೂಮಿ ಕಲಾವಿದ ಕೆ. ಕರಿಬಸವಯ್ಯ ಶುಕ್ರವಾರ (ಫೆ.3) ಮಧ್ಯಾಹ್ನ 2.30ರ ಸುಮಾರಿಗೆ ನಿಧನರಾಗಿದ್ದಾರೆ. ಮಂಗಳವಾರ ಅಪಘಾತಕ್ಕೀಡಾಗಿದ್ದ ಕರಿಬಸವಯ್ಯನವರನ್ನು ರಾಜಾಜಿನಗರದ ಪ್ರಿಸ್ಟೀನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ಆಸ್ಪತ್ರೆಯಲ್ಲೆ ಇಂದು ಮದ್ಯಾಹ್ನ 2:30ರ ಸುಮಾರಿಗೆ ಕೊನೆಯುಸಿರೆಳೆದರು.

ಕನಕಪುರದಿಂದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಹಿಂತಿರುಗಬೇಕಾದರೆ ಮಂಗಳವಾರ ಜನವರಿ 31ರ ಬೆಳಗಿನ ಜಾವ 3:00 ಗಂಟೆಯಲ್ಲಿ ಈ ಅಪಘಾತ ಸಂಭವಿಸಿದೆ. ಅವರು ತಮ್ಮ ಕಾರನ್ನು ಸ್ವತಃ ತಾವೇ ಚಾಲನೇ ಮಾಡುತ್ತಿದ್ದರು. ರಸ್ತೆಯಲ್ಲಿನ ಹಳ್ಳ ತಪ್ಪಿಸಲು ಹೋಗಿ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಕಾರು ಉರುಳಿ ಬಿದ್ದಿತ್ತು. ಹರಿಕತೆ ಕಾರ್ಯಕ್ರಮ ನಡೆಸಿಕೊಡುವ ಸಲುವಾಗಿ ಅವರು ಕನಕಪುರಕ್ಕೆ ತೆರಳಿದ್ದರು.

ನಿರ್ದೇಶಕ ನಾಗತ್ತಿಹಳ್ಳಿ ಚಂದ್ರಶೇಖರ್ ತಮ್ಮ ಅಭಿವ್ಯಕ್ತಿ ಸಂಸ್ಖ್ರಿತ ವೇದಿಕೆಯ ಮೂಲಕ ಕರಿಬಸವಯ್ಯನವರ ವೈದ್ಯಕೀಯ ಖರ್ಚನ್ನು ಭರಿಸುವದಾಗಿ ಮುಂದೆ ಬಂದಿದ್ದರು. 2009 ರಿಂದ ತಮ್ಮ ಮದುವೆಯಾಗಿದ್ದ ಮಗಳ ಆತ್ಮಹತ್ಯೆಯಿಂದ ಬಹಳ ನೊಂದಿದ್ದರು.

ಕರಿಬಸವಯ್ಯ ಶೇಷಾದ್ರಿಪುರಂ ಕಾಲೇಜಿನ ಅಟೆಂಡರ್ ವೃತ್ತಿಯಿಂದ, ರಂಗಭೂಮಿ, ನಾಟಕ, ಕಿರುತರೆ, ಸಿನಿಮಾ ಎಲ್ಲವನ್ನೂ ಸಮನಾಗಿ ಸರಿದೂಗಿಸಿಕೊಂಡು ಬಂದವರು.
‘ಉಂಡೂ ಹೋದ ಕೊಂಡೂ ಹೋದ’ ಚಿತ್ರದ ಮೂಲಕ ಬಣ್ಣ ಹಚ್ಚಿದ ಇವರು ಕೊಟ್ರೇಶಿ ಕನಸು, ಜನುಮದ ಜೋಡಿ, ಮುಂಗಾರಿನ ಮಿಂಚು, ಹೀಗೆ ಸಾಕಷ್ಟು ಚಿತ್ರಗಳಲ್ಲಿ ಗಮನಾರ್ಹವಾಗಿ ನಟಿಸಿದವರು. ಇತ್ತೀಚೆಗೆ ನಟಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವು ಬಿಡುಗಡೆಯ ಹೊಸ್ತಿಲಲ್ಲಿ ನಿಂತಿದೆ. ಕನ್ನಡ ಚಿತ್ರರಂಗಕ್ಕೆ ಕರಿಬಸವಯ್ಯನವರ ಸಾವು ತುಂಬಲಾರದ ನಷ್ಟವಾಗಿದೆ.

ಅವರ ಆತ್ಮಕ್ಕೆ ಶಾಂತಿ ಕೊರುವ ಕನ್ನಡಹನಿಗಳ ಬಳಗ.

ಇನ್ನಾದರೂ ಸರ್ಕಾರ ಹಳ್ಳಕೊಳ್ಳಗಳನ್ನು ಮುಚ್ಚಿ, ನಮ್ಮ ಭವ್ಯ ಪರಂಪರೆಯ ಜನರನ್ನು ಉಳಿಸಲಿ ಎಂದು ಕೋರುತ್ತೇವೆ.

Please listen to the complete Life story on his own narration :  Click Here

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech