Close X

ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯ ನಿಧನ !!!

ಒಬ್ಬ ಒಳ್ಳೆ ಉತ್ತಮ ರಾಜಕಾರಣಿ ಎಂದೇ ಪ್ರಸಿದ್ದರಾಗಿದ್ದ ವಿ. ಎಸ್. ಆಚಾರ್ಯ ದೈವಾದೀನರಾಗಿದ್ದಾರೆ. ಉನ್ನತ ಶಿಕ್ಷಣ ಸಚಿವ ಸ್ಥಾನದಲ್ಲಿದ್ದ ವಿ. ಎಸ್. ಆಚಾರ್ಯ, ಹಠಾತ್ತಾಗಿ ಅಸ್ವಸ್ಥರಾದ ಕಾರಣ ಅವರನ್ನು ಬೆಂಗಳೂರಿನ ಮಲ್ಲಿಗೆ ನರ್ಸಿಂಗ್ ಹೋಂನಲ್ಲಿ ಸೇರಿಸಿದರೂ ಫಲಕಾರಿಯಾಗದೆ ಆಸ್ಪತ್ರೆಯಲ್ಲೆ ಕೊನೆಯುಸಿರೆಳೆದರು.

ಕಾಲೇಜ್ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ವಿ. ಎಸ್. ಆಚಾರ್ಯ, ವೇದಿಕೆ ಮೇಲೆ ಹಠಾತ್ತಾಗಿ ಕುಸಿದು ಬಿದ್ದರು. ಅವರನ್ನು ಕೂಡಲೆ ಮಲ್ಲಿಗೆ ನರ್ಸಿಂಗ್ ಹೋಂಗೆ ಸೇರಿಸಿಯಾದರು, ಫಲಕಾರಿಯಾಗಲಿಲ್ಲ. ಇಂದು ಮಧ್ಯಾಹ್ನವೇ ಅವರು ಮಂಗಳೂರಿನಿಂದ ವಿಮಾನದಲ್ಲಿ ಬೆಂಗಳೂರಿಗೆ ಮರಳಿದ್ದರು. ಅಲ್ಲಿಂದ ನೇರವಾಗಿ ಅವರು ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿ ವೇದಿಕೆ ಏರುವಾಗ ಕುಸಿದುಬಿದ್ದಿದ್ದಾರೆ ಎಂದು ತಿಳಿದಿಬಂದಿದೆ.

ಗಣ್ಯರ ಕಂಬನಿ : ಆಚಾರ್ಯ ಅವರ ಸಾವು ಬಿಜೆಪಿ ಪಾಲಿಗೆ ತುಂಬಲಾರದ ನಷ್ಟ. ಅವರು ಎಲ್ಲ ರಾಜಕಾರಣಿಗಳಿಗೆ ಮಾರ್ಗದರ್ಶಿಗಳಾಗಿದ್ದರು. ಅವರ ಸ್ಥಾನವನ್ನು ತುಂಬುವುದು ಕಷ್ಟಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಕಂಬನಿ ಮಿಡಿದಿದ್ದಾರೆ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಮಲ್ಲಿಗೆ ಆಸ್ಪತ್ರೆಗೆ ಧಾವಿಸಿದ್ದಾರೆ.

ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕೋರುವ ಕನ್ನಡಹನಿಗಳ ಬಳಗ.
v-s-acharyaಅವರ ಪೂರ್ತಿ ವಿವರ ಈ ಕೆಳಕಂಡಂತಿದೆ :

Name : V. S. Acharya
Constituency : Legislative Council
Date of Birth : 6th July 1940
Father’s Name : Late Sri Katta Shrinivas Acharya
Qualification : B.Sc, M.B.B.S
Residence Address : Ravi – kiran, Kujibetta – Post,
Udupi – 576 102
08252- 20539® 30099(O)
Office Address : Room No.155,
Legislators Home, Bangalore.
Family : 1 Daughter, 4 Sons
BRIEF PROFILE :
Shri V.S. Acharya is a social worker who is associated with lot of social and cultural organizations. During Emergency he courted arrest for 19 months
Positions held: Home Minister, Karnataka State Member, Legislative Council Municipal President, Udupi City Municipality.
Hobbies : Reading and Traveling

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech