Close X

ಚಿಂಗಾರಿ ಚಿತ್ರದ ಯಶಸ್ಸಿನಿಂದ ದರ್ಶನ್ ಸ್ಯಾಂಡಲ್‌ವುಡ್‍ನಲ್ಲಿ 2ನೇ ಸ್ಥಾನಕ್ಕೆರಿದ್ದಾರೆ

ಚಿಂಗಾರಿ ಚಿತ್ರದ ಯಶಸ್ಸಿನಿಂದ ದರ್ಶನ್ ಸ್ಯಾಂಡಲ್‌ವುಡ್‍ನಲ್ಲಿ 2ನೇ ಸ್ಥಾನಕ್ಕೆರಿದ್ದಾರೆ. ಛಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್‍ವುಡ್‍ನ ಬಾದ್ ಷಾ ಎಂದೆ ಪರಿಗಣಿತರಾದವರು, ಮತ್ತೊಮ್ಮೆ ನಿರೂಪಿಸಿದ್ದಾರೆ. ಚಿಂಗಾರಿ ಯಶಸ್ಸು ಅವರ ಹುಟ್ಟು ಹಬ್ಬಕ್ಕೆ (ಫೆ. 16) ಕೊಡುಗೆಯಾಗಿದೆ. ಬಾಕ್ಸಾಫೀಸ್‍ನಲ್ಲಿ ಬಂಗಾರದ ಕಲೆಕ್ಷನ್ ಮಾಡಿದೆ ಚಿಂಗಾರಿ ಚಿತ್ರ.

ಚಿತ್ರದ ನಿರ್ಮಾಪಕರು “ಚಿಂಗಾರಿ” ಚಿತ್ರದ ಗಳಿಕೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಎರಡು ವಾರಗಳನ್ನು ಪೂರೈಸಿರುವ ಚಿತ್ರವು 140 ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಾಗಿದ್ದು ಅದೇ ಸಂಖ್ಯೆಯನ್ನು ಇನ್ನೂ ಕಾಯ್ದಿರಿಸಿಕೊಂಡಿದೆ. “ಚಿಂಗಾರಿ” ಚಿತ್ರದ ನಿರ್ಮಾಪಕ ಮಹದೇವ್ ಅವರ ಪ್ರಕಾರ ಚಿತ್ರದ ಮೊದಲ ವಾರದ ಗಳಿಕೆ ರೂ. 6,07,60,000/- !!!

ಈ ಕೆಳಗಿನ ಚಿತ್ರದ ಒಗಟನ್ನು ಬಿಡಿಸಿ ನಿಮ್ಮ ನೆಚ್ಚಿನ ನಾಯಕನನ್ನು ಕಂಡುಹಿಡಿಯಿರಿ :) :)

ಈ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರದೋದ್ಯಮದಲ್ಲಿ ನಂಬರ್ 2 ಪಟ್ಟಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದ್ದಾರೆ. ‘ಸಾರಥಿ’ ಚಿತ್ರ ಬಾಕ್ಸಾಫೀಸಲ್ಲಿ ಭರ್ಜರಿ ಹಿಟ್ ದಾಖಲಿಸಿದ ಬಳಿಕ ‘ಚಿಂಗಾರಿ’ ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆ ಬೆಲೆಗೆ ಮಾರಾಟವಾಗಿತ್ತು.

ಮೂಲ : ದಟ್ಸ್‍ಕನ್ನಡ

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech