Close X

ಚಿಂಗಾರಿ ಚಿತ್ರ ಕರ್ನಾಟಕದಾದ್ಯಂತ ದಾಖಲೆಯ 175 ಸ್ಕ್ರೀನ್‍ಗಳಲ್ಲಿ ಬಿಡುಗಡೆ

ಮೆಜಸ್ಟಿಕ್ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಛಾಲೆಂಜಿಗ್ ಸ್ಟಾರ್ ದರ್ಶನ್ ತಮ್ಮ 12 ವರ್ಷದ ವೃತ್ತಿಜೀವನದಲ್ಲಿ ಮೊದಲ ಸಲ ಅತ್ಯಂತ ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ. ತಮ್ಮ ಚಿತ್ರ ಚಿಂಗಾರಿ ಈ ದಿನ ಫೆಬ್ರವರಿ 3 ರಂದು ತೆರೆಕಾಣುತಲಿದ್ದು, ಬರೋಬ್ಬರಿ 175 ಸ್ಕ್ರೀನ್‌ಗಳನ್ನು ಕರ್ನಾಟಕದಾದ್ಯಂತ ಆವರಿಸುತ್ತಿದೆ.

“ಸಾರಥಿ” ಚಿತ್ರ ತನ್ನ ನೂರು ದಿನಗಳ ಪ್ರದರ್ಶನದಿಂದ ರೂ. 25 ಕೋಟಿ ಹಣ ಸಂಗ್ರಹಿಸಿದ್ದು, ಇದು ದರ್ಶನ್ ರ ಉತ್ಸಾಹ ಮತ್ತು ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಇದೇ ಕಾರಣಕ್ಕೂ ಚಿಂಗಾರಿ ಭರ್ಜರಿ ಆರಂಭಗೊಳ್ಳುತ್ತಿದೆ.

ಸಾರಥಿ ನಂತರ 125 ದಿನಗಳಾದ ಮೇಲೆ ಬರುತ್ತಿರುವ ಚಿಂಗಾರಿ ಚಿತ್ರ ಬಹಳ ನಿರೀಕ್ಷೆಗಳನ್ನು ಹೊಂದಿದೆ. ಎಂಟು action ದೃಶ್ಯಗಳನ್ನು ಸ್ವಿಜರ್ಲ್ಯಾಂಡ್‌ನಲ್ಲಿ ಶೂಟ್ ಮಾಡಲಾಗಿದೆ ಎಂದು ನಿರ್ದೇಶಕ ಹರ್ಷ ರವರು ತಿಳಿಸಿದ್ದಾರೆ. ನೃತ್ಯ ನಿರ್ದೇಶಕನಿಂದ ಭಡ್ತಿ ಪಡೆದು ನಿರ್ದೇಶಕನಾಗಿರುವ ಹರ್ಷರ ಹಿಂದಿನ ಚಿತ್ರಗಳಾದ ಬಿರುಗಾಳಿ ಮತ್ತು ಗೆಳೆಯ ಅಂತಹ ದೊಡ್ಡ ಮಟ್ಟದ ಯಶಸ್ಸು ಕಾಣಲಿಲ್ಲ. ಆದರೆ ಚಿಂಗಾರಿ ಮೂರನೇ ಚಿತ್ರವಾಗಿದ್ದು, ದರ್ಶನ್, ದೀಪಿಕಾ ಕಾಮ್ಮೆಯ್ಯ, ಸೃಜನ್ ಲೋಕೇಶ್ ಮತ್ತು ಭಾವನ ನಟಿಸಿರುವ ಚಿತ್ರ ಮಾರುಕಟ್ಟೆಯಲ್ಲಿ ದರ್ಶನ್ ರ ಹಿಂದಿನ ಚಿತ್ರ ಸಾರಥಿ ದಾಖಲೆಯನ್ನು ಆದರಿಸಿ ಬಹು ದೊಡ್ಡ ಬೆಲೆಗೆ ಮಾರಾಟವಾಗಿದೆ.

chingari-kannada-movieಚಿಂಗಾರಿ ಚಿತ್ರವು ರೂ. 8 ಕೋಟಿ ಬಜೆಟ್‌ನಲ್ಲಿ ಮಾಡಿದ್ದು, ಈಗಾಗಲೇ ರೂ. 12 ಕೋಟಿಯನ್ನು ದೋಚಿದೆ. ಚಿತ್ರವನ್ನು ಮಹದೇವು ಮತ್ತು ಮನು ಗೌಡ ನಿರ್ಮಿಸುತ್ತಿದ್ದಾರೆ.

ವಿ. ಹರಿಕೃಷ್ಣರ ಸಂಗೀತ ಮತ್ತು ಹೆಚ್. ಸಿ. ವೇಣುರವರ ಕ್ಯಾಮೆರಾ ಕೈಚಳಕವಿದ್ದು, ಸ್ವಿಜರ್ಲ್ಯಾಂಡ್‌‍ನ ವಿಲಕ್ಷಣ ತಾಣಗಳಲ್ಲಿ ಸೆರೆಹಿಡಿಯಲಾಗಿದೆ.

ಸೃಜನ್ ಲೋಕೇಶ್, ಭಾವನ, ಯಶಸ್ ಸೂರ್ಯ, ಪ್ರದೀಪ್, ರಮೇಶ್ ಭಟ್, ಸುಮಿತ್ರ, ಮಧು, ತೇಜು, ವಿಶ್ವ ಮುಂತಾದವರೂ ತಾರಾಗಣದಲ್ಲಿದ್ದಾರೆ.

ಚಿತ್ರ ಒಳ್ಳೆ ಯಶಸ್ಸು ಕಂಡು ಸಾರಥಿಯ ದಾಖಲೆಗಳನ್ನು ಮುರಿಯಲಿ ಎಂದು ಹಾರೈಸುವ ಕನ್ನಡಹನಿಗಳ ಬಳಗ :) :)

Chingari Movie Stils : Click Here

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech