Close X

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ !!!

ಒಂದೊಮ್ಮೆ ಚಾಲೆಂಚಿಂಗ್ ಸ್ಟಾರ್‍ ದರ್ಶನ್ ಮತ್ತು ಸುದೀಪ್ ಮದ್ಯೆ ಎಷ್ಟು ಪೈಪೋಟಿ ಇತ್ತೆಂದರೆ, ಒಬ್ಬರು ಪೂರ್ವ ಆದರೆ ಮತ್ತೊಬ್ಬರು ಪಶ್ಚಿಮ. ಆದರೆ ಈಗ ಇಬ್ಬರೂ ಸೇರಿ ಕನ್ನಡ ಸಿನಿಮಾ ರಂಗವನ್ನ ಬೆಳೆಸಲು ಕಾಲ ಕೂಡಿಬಂದಿದೆ. ಇತ್ತೀಚೆಗೆ ದರ್ಶನ್‍ರ ’ಸಾರಥಿ’ ಚಿತ್ರದ ಶತದಿನೋತ್ಸವ ಸಂಭ್ರಮದಲ್ಲಿ ಸುದೀಪ್ ಪಾಲ್ಗೊಂಡಿದ್ದರು. ಹಾಗೆ CCL season 2ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ದರ್ಶನ್ ಸೇರಿಕೊಂಡರು. ಹೀಗೆ ಇಬ್ಬರೂ ಹತ್ತಿರವಾಗುತ್ತಿದ್ದಾರೆ ಎನ್ನುವ ಸಂತೋಷವಿದ್ದರೆ, ಅದಕ್ಕಿಂತ ಸಂತೋಷ ಮತ್ತೊಂದಿದೆ.

ಅದೇ ಇಬ್ಬರೂ ಒಂದೇ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಅಭಿನಯಿಸುತ್ತಾರೆ ಅನ್ನುವುದು. ಉದ್ಯಮಿ ಹಾಗೂ ಚಿತ್ರ ನಿರ್ಮಾಪಕ ನೈಸ್ ಕಂಪನಿ ಮಾಲಿಕ ಅಶೋಕ್ ಖೇಣಿ ಈ ಇಬ್ಬರು ಮೇರು ನಟರನ್ನು ಒಟ್ಟಿಗೆ ಒಂದೇ ಚಿತ್ರದಲ್ಲಿ ತರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇವರಿಬ್ಬರೂ ಇರುವ ಮಲ್ಟಿಸ್ಟಾರ್ ಸಿನಿಮಾ ಒಂದನ್ನು ಮಾಡುವುದಾಗಿ ಖೇಣಿ ಔಪಚಾರಿಕವಾಗಿ ಫೆ. 13 ಸೋಮವಾರದಂದು ಪ್ರಕಟಿಸಿದ್ದಾರೆ.

Kiccha sudeep and Toogudeep Darshan come togetherಈ ಚಿತ್ರದ ಬಗ್ಗೆ ಹೆಚ್ಚಿಗೆ ಮಾಹಿತಿ ಬಹಿರಂಗಪಡಿಸದಿದ್ದರು, ಇದೊಂದು ಅಣ್ಣ ತಮ್ಮಂದಿರ ಸೆಂಟಿಮೆಂಟಲ್ ಚಿತ್ರವಾಗಿದೆಯಂತೆ. ಅಣ್ಣನು ಹಳ್ಳಿಗಾಡಾದರೆ, ತಮ್ಮ ನಗರದವನಾಗಿರುತ್ತಾನೆ. ಹೆಚ್ಚಿನ ವಿವರಗಳನ್ನು ಅತೀ ಶೀಘ್ರದಲ್ಲಿ ಪ್ರಕಟಿಸುವುದಾಗಿ ಖೇಣಿ ಹೇಳಿದ್ದಾರೆ.

ಈ ಇಬ್ಬರ ಜೋಡಿ ಹಿಂದೆ ಕನ್ನಡ ಸಿನಿಮಾ ಕಂಡ ಎಲ್ಲಾ ಜೋಡಿಗಳ ದಾಖಲೆಗಳನ್ನು ಮುರಿಯಲಿ ಎಂದು ಆಶಿಸುವ ಕನ್ನಡಹನಿಗಳ ಬಳಗ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech