Close X

ಫೆ. 16ಕ್ಕೆ ದರ್ಶನ್‌ರ ಹುಟ್ಟುಹಬ್ಬದಂದು ಬುಲ್ ಬುಲ್ ಚಿತ್ರ ಸೆಟ್ಟೇರಲಿದೆ

ಫೆಬ್ರವರಿ 16ರಂದು ಛಾಲೇಂಜಿಂಗ್ ಸ್ಟಾರ್ ದರ್ಶನ್‌ರ ಹುಟ್ಟು ಹಬ್ಬದ ದಿನದಂದು ಕಂಠೀರವ ಸ್ಟೂಡಿಯೋದಲ್ಲಿ ಅವರ ಮುಂದಿನ ಚಿತ್ರ “ಬುಲ್ ಬುಲ್” ಸೆಟ್ಟೇರುತ್ತಿದೆ. ಈ ಚಿತ್ರಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ಲಾಪ್ ಹಿಡಿದು ಕ್ಲಾಪ್ ಮಾಡಲಿದ್ದು, ಕಿಚ್ಚ ಸುದೀಪ್ ಕ್ಯಾಮೆರಾ ಚಾಲನೆ ಮಾಡಲಿದ್ದಾರೆ. ಚಿತ್ರವನ್ನು ತೂಗುದೀಪ್ ಶ್ರೀನಿವಾಸ್ ಅವರ ಪತ್ನಿ ಮತ್ತು ದರ್ಶನ್‍ರ ತಾಯಿ ಮಿಸ್. ಮೀನಾ ತೂಗುದೀಪ್ ಚಿತ್ರವನ್ನು ಸಮರ್ಪಿಸಲಿದ್ದು, ಎಂ. ಡಿ. ಶ್ರೀದರ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಎಂ. ಡಿ. ಶ್ರೀದರ್ ಈ ಮೊದಲು ದರ್ಶನ್‌ರ ಪೋರ್ಕಿ ಚಿತ್ರವನ್ನು ನಿರ್ದೇಶಿಸಿದ್ದರು.

ಚಿತ್ರದ ನಾಯಕಿಯು ಇನ್ನೂ ತೀರ್ಮಾನವಾಗಿಲ್ಲ. ಈ ಚಿತ್ರವು ತೆಲುಗಿನ ಹಿಟ್ ಚಿತ್ರ “ಡಾರ್ಲಿಂಗ್”ನ ರೀಮೇಕ್ ಆಗಿದ್ದು, ಪ್ರಬಾಸ್ ಮತ್ತು ಕಾಜಲ್ ಅಗರ್‌ವಾಲ್ ಆ ಚಿತ್ರದ ನಾಯಕ ಮತ್ತು ನಾಯಕಿಯರು.

ಕವಿರಾಜ್ ಚಿತ್ರಕಥೆ ಬರೆಯುತ್ತಿದ್ದಾರೆ. ಇದರ ಜೊತೆಗೆ ಚಿತ್ರದ ನಿರ್ಮಾಣದಲ್ಲೂ ಪಾಲುದಾರರಾಗಿದ್ದು, ಚಿತ್ರದ ಮೊದಲಾರ್ದವನ್ನು ಸಂಪೂರ್ಣವಾಗಿ ಬದಲಾಗಿಸಿದೆ ಎಂದು ಚಿತ್ರಲೋಕ ತಾಣಕ್ಕೆ ತಿಳಿಸಿದ್ದಾರೆ. ಹಾಗೂ ಚಿತ್ರದ ಪೂರ್ವಾರ್ದವನ್ನು ಕೆಲವು ಹೊಸ ನೋಟದ ತಕ್ಕಂತೆ ಬದಲಾಯಿಸಲಾಗಿದೆ ಎಂದು ತಿಳಿಸಿದರು.

bul-bul-kannada-movie-launching-feb-16th-2012

ಕೃಷ್ಣಕುಮಾರ್ ಚಿತ್ರಕೆ ಛಾಯಾಗ್ರಹಣ ಒದಗಿಸುತ್ತಿದ್ದು ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಕೃಷ್ಣಕುಮಾರ್, ಹರಿಕೃಷ್ಣ, ಕವಿರಾಜ್ ಮತ್ತು ದಿನಕರ್ ತೂಗುದೀಪ ಚಿತ್ರದ ನಿರ್ಮಾಣದ ಪಾಲುದಾರಿಕೆಯನ್ನು ಹಂಚಿಕೊಳ್ಲಲಿದ್ದಾರೆ.

ದರ್ಶನ್‌ರ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸುತ್ತ ಅವರ ಈ ಚಿತ್ರ ಚಿಂಗಾರಿ ಮತ್ತು ಸಾರಥಿಯ ದಾಖಲೆಗಳನ್ನು ಮುರಿಯಲಿ ಎಂದು ಆಶಿಸುವ ಕನ್ನಡಹನಿಗಳ ಬಳಗ :) :)

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech