Close X

ಆ ದಿನಗಳು ಚಿತ್ರದ ನಾಯಕ ಚೇತನ್ ಮತ್ತೆ ಬರುತ್ತಿದ್ದಾರೆ ನಿಮ್ಮನ್ನು ರಂಜಿಸಲು

Aa dinagalu hero Chetan_Kumar

ಆ ದಿನಗಳು ಚಿತ್ರದ ನಾಯಕ ಚೇತನ್ ಬಹಳ ದಿನಗಳಿಂದ ಚಿತ್ರರಂಗದಿಂದ ತಮ್ಮ ವಯಕ್ತಿಕ ಕಾರಣಗಳಿಂದ ದೂರ ಉಳಿದಿದ್ದರು.

ಆದರೆ ಇದೀಗ ಮತ್ತೆ ದೊಡ್ಡ ಚಿತ್ರಗಳ ಮೂಲಕ ವಾಪಸ್ ಬಂದಿದ್ದಾರೆ. ರವಿ ಶ್ರೀವತ್ಸರವರ ದಶಮುಖ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಮಾರ್ಚ್ 2ರಂದು ತೆರೆಕಾಣಲಿದೆ.

ಈಗ ನಾಗಶೇಖರ್ ನಿರ್ದೇಶಿಸುತ್ತಿರುವ ಮೈನಾ ಚಿತ್ರಕ್ಕೆ ಚೇತನ್ ನಾಯಕನಾಗಿ ನಟಿಸಲು ಸಹಿ ಹಾಕಿದ್ದಾರೆ. ನಾಗಶೇಖರ್ ಈ ಚಿತ್ರವನ್ನು ಎನ್. ಎಸ್. ರಾಜ್‌ಕುಮಾರ್ ನಿರ್ಮಿಸುತ್ತಿದ್ದಾರೆ. ನಿತ್ಯ ಮೆನನ್ ಚಿತ್ರದ ನಾಯಕಿಯಾಗಿ ಆಗಲೆ ಆಯ್ಕೆಗೊಂಡಿದ್ದಾರೆ.

ಈ ಮೊದಲು ಯಶ್ ಮತ್ತು ರಮ್ಯ ಚಿತ್ರಕ್ಕೆ ಆಯ್ಕೆಯಾಗಿದ್ದರು. ಆದರೆ ಈ ಇಬ್ಬರು ಬೇರೆ ಚಿತ್ರಗಳಲ್ಲಿ ನಟಿಸುತ್ತಿದ್ದು ಬಹಳ ಬ್ಯುಸಿಯಾಗಿರುವುದರಿಂದ ಚಿತ್ರಕ್ಕೆ ಬೇರೆಯವರನ್ನು ಹುಡುಕಲಾಯಿತು. ಆಗ ಚಿತ್ರಕಥೆ ಕೇಳಿದ ಚೇತನ್ ಹೆಚ್ಚು ಪ್ರಭಾವಿತರಾಗಿದ್ದಾರೆ. ಚಿತ್ರವು ಮಾರ್ಚ್ ತಿಂಗಳಲ್ಲಿ ಸೆಟ್ಟೇರಲಿದ್ದು, ಜೆಸ್ಸಿ ಗಿಫ್ಟ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech