Close X

40 ಕಂತುಗಳ ಕನ್ನಡದ ಕೋಟ್ಯಾದಿಪತಿ ಕಾರ್ಯಕ್ರಮಕ್ಕೆ ಪುನೀತ್‌ಗೆ 6.5 ಕೋಟಿ ರೂ !

ಒಂದು ಸಂತೋಷದ ವಿಷಯವೆಂದರೆ ನಂ. 1 ಸ್ಟಾರ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಈಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುವರ್ಣ ವಾಹಿನಿಯಲ್ಲಿ “ಕನ್ನಡದ ಕೋಟ್ಯಾದಿಪತಿ” ಎನ್ನುವ ಕಾರ್ಯಕ್ರಮಕ್ಕೆ ಪುನೀತ್‌ರನ್ನು ಆಯ್ಕೆಮಾಡಿದ್ದು ಬರೋಬ್ಬರಿ 40ಕ್ಕೂ ಹೆಚ್ಚು ಕಂತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ 40 ಕಂತುಗಳಿಗೆ ಅವರಿಗೆ ಸಂದಾಯವಾಗುವ ಹಣ ರೂ. 6.5 ಕೋಟಿ !!!

ಇದೀಗ ಪುನೀತ್ ರಾಜ್‌ಕುಮಾರ ತಮ್ಮ ಅಣ್ಣಬಾಂಡ್ ಚಿತ್ರವನ್ನು ಬೆಳಗ್ಗೆ ರಾತ್ರಿಯಂತೆ ಲೆಕ್ಕಿಸದೆ ಪೂರ್ಣಗೊಳಿಸುತ್ತಿದ್ದಾರೆ. ಕನ್ನಡದ ಕೋಟ್ಯಾದಿಪತಿ ಕಾರ್ಯಕ್ರಮ್ಮಕ್ಕೆ ತಮ್ಮನ್ನು ತಾವೇ ಹೆಚ್ಚಿನ ಜ್ಞಾನಪಡೆಯುವಲ್ಲಿ ಶ್ರಮವಹಿಸುತ್ತಿದ್ದಾರೆ. ಈ ಕಾರ್ಯಕ್ರಮವು ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡ್ಡುತ್ತಿದ್ದ “ಕೌನ್ ಬನೇಗಾ ಕರೋಡ್‌ಪತಿ” ಕಾರ್ಯಕ್ರಮದ ತದ್ರೂಪಾಗಿದೆ.

kannada-kbc

ಕನ್ನಡದ ಕರೋಡ್‌ಪತಿಯಲ್ಲಿ ಪುನೀತ್ ರಾಜ್‌ಕುಮಾರ್ ಕಾರ್ಯಕ್ರಮವನ್ನು ನಡೆಸಲಿದ್ದು ಇದರ ತಾಲೀಮಿಗಾಗಿ ಒಮ್ಮೆ ಅಮಿತಾಬ್ ಬಚ್ಚನ್ ಜೊತೆ ಕೂಡ ಮುಂಬಯಿಯ ಕೆ. ಬಿ. ಸಿ ಸೆಟ್ ನಲ್ಲಿ ಸಮಾಲೋಚಿಸಿದ್ದಾರೆ.

ಈ ವಿಷಯ ಪುನೀತ್ ರಾಜ್‍ಕುಮಾರ್ ಫ್ಯಾನ್ಸ್‌ಗೆ ತುಂಬ ಖುಷಿಕೊಟ್ಟಿದೆ. ಪುನೀತ್ ಹೇಳುತ್ತಾರೆ : “ನನ್ನ ಅಭಿಮಾನಿಗಳೊಂದಿಗೆ ಸೇರಲು ಇದೊಂದು ಒಳ್ಳೆಯ ಅವಕಾಶ”. ಅಮಿತಾಬ್ ಬಚ್ಚನ್‌ರ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮವು ನನ್ನ ಜ್ಞಾನ ಹೆಚ್ಚಿಸಿಕೊಳ್ಳುವ ಕಾರ್ಯಕ್ರಮವಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

ಕನ್ನಡಕ್ಕೆ ಕರೋಡ್‌ಪತಿಯನ್ನು ತರುತ್ತಿರುವವರಿಗೆ ನಮ್ಮ ಶುಭಕಾಂಕ್ಷೆ :)

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech