Close X

ಸಂಕ್ರಾಂತಿ ಹಬ್ಬಕ್ಕೆ ಎರಡು ಬಹು ನಿರೀಕ್ಷೆಯ ಚಿತ್ರಗಳು – ಕೋ ಕೋ ಕೋಳಿ ಕೋತಿ ಮತ್ತು ಸಿದ್ಲಿಂಗು

Ko Ko Koli Kothi and Sidlingu for sankranthi festivalವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಕನ್ನಡದ ಎರಡು ಬಹು ನಿರೀಕ್ಷೆಯ ಚಿತ್ರಗಳು ತೆರೆಗೆ. ಬಹು ನಿರೀಕ್ಷೆಯ ಕೋ ಕೋ ಕೋಳಿ ಕೋತಿ ಮತ್ತು ಸಿದ್ಲಿಂಗು ಚಿತ್ರಗಳು ಇದೇ ಸಂಕ್ರಾಂತಿಯಂದು ಕನ್ನಡದ ಸಿನಿಮಾ ಪ್ರೇಕ್ಷಕರನ್ನು ರಂಜಿಸಲಿದೆ. ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ. ಎರಡೂ ಚಿತ್ರಗಳು ಯು/ಎ ಪ್ರಮಾಣ ಪತ್ರವನ್ನು ಹೊಂದಿದೆ.

ಆರ್. ಚಂದ್ರು ನಿರ್ದೇಶಿಸಿರುವ ಶ್ರೀನಗರ ಕಿಟ್ಟಿ, ಪ್ರಿಯಾಮಣಿ ಮತ್ತು ಹರ್ಷಿಕಾ ಪೂನಚ್ಚ ಕೋ ಕೋ ಕೋಳಿ ಕೋತಿ ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರಕ್ಕೆ ರಮಣ ಗೋಕುಲ ಸಂಗೀತ ನಿರ್ದೇಶಿಸಿದ್ದಾರೆ. ಮೂಲಗಳ ಪ್ರಕಾರ ಕೋ ಕೋ ಕೋಳಿ ಕೋತಿ ಚಿತ್ರವೂ ಸಂಪೂರ್ಣ ಕಮರ್ಷಿಯಲ್ ಚಿತ್ರವಾಗಿದೆ.

ಸಿದ್ಲಿಂಗು ಚಿತ್ರವನ್ನು ವಿಜಯಪ್ರಸಾದ್ ನಿರ್ದೇಶಿಸಿದ್ದಾರೆ, ಲೂಸ್ ಮಾದ ಯೋಗೇಶ್ ಮತ್ತು ರಮ್ಯ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿದ್ಲಿಂಗು ಚಿತ್ರಕ್ಕೆ ಒಳ್ಳೆ ಕಾಮಿಡಿ ಟಚ್ ಇದೆಯಂತೆ. ರಮ್ಯ ಒಂದು ಮಧ್ಯಮ ಶಾಲಾ ಶಿಕ್ಷಕಿಯ ಪಾತ್ರ ಮಾಡಿದ್ದಾರೆ. ರಮ್ಯಳ ಪಾತ್ರ ಅಷ್ಟೇನೂ ಗ್ಲಾಮರ್ಸ್ ಪಾತ್ರವಲ್ಲ. ಈ ಚಿತ್ರದಲ್ಲಿ  ಮಹಿಳೆ ಒಬ್ಬ ಮನುಷ್ಯ ಜೀವನದಲ್ಲಿ ಎಷ್ಟು ಪರಿಣಾಮಕಾರಿಯಾಗುತ್ತಾಳೆ ಎಂದು ತಿಳಿಸಿಕೊಡುತ್ತದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech