Close X

ಪುನೀತ್‌ರ ಅಣ್ಣಾಬಾಂಡ್ ಚಿತ್ರ ಏಪ್ರಿಲ್ 18ರಂದು ತೆರೆಗೆ

Anna_Bondಬಹು ನಿರೀಕ್ಷೆಯ ಪುನೀತ್ ರಾಜ್‍ಕುಮಾರ್ ಅಭಿನಯದ  “ಅಣ್ಣಾಬಾಂಡ್” ಚಿತ್ರವು ಏಪ್ರಿಲ್ 18ರಂದು ಬಿಡುಗಡೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ದುನಿಯಾ ಮತ್ತು ಜಾಕಿಯಂತ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ಸೂರಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಿಡುಗಡೆಯೊಂದಿಗೆ ಕನ್ನಡ ಚಲನಚಿತ್ರದ ಕಣ್ಮಣಿ ಡಾ. ರಾಜ್‍ಕುಮಾರ್‌ರವರ ಹುಟ್ಟು ಹಬ್ಬವನ್ನು ನೆನಪಿಸಿಕೊಂಡಂತಾಗುತ್ತದೆ. ಕನ್ನಡದಲ್ಲಿ ಮೊದಲ ಬಾರಿಗೆ ಬಾಂಡ್ ಚಿತ್ರಗಳಲ್ಲಿ ನಟಿಸಿ ಹಿಟ್ ಹೊಂದಿದ ಹೆಗ್ಗಳಿಕೆ ಡಾ. ರಾಜ್‌ಕುಮಾರ್‌ರಿಗೆ ಸಲ್ಲಬೇಕು. ಅವರ ನಟನೆ ನೋಡುತ್ತಿದ್ದರೆ ನಿಜವಾದ ಹಾಲಿವುಡ್ ಬಾಂಡ್‌ಗೇನು ಕಮ್ಮಿಯಿಲ್ಲ. ಅವರ ಮಗ ಪುನೀತ್ ಈಗ ಅವರ ಸಂಸ್ಕೃತಿಯನ್ನು ಹಾಗೆ ಮುಂದುವರೆಸಲಿ ಎಂದು ಆಶಿಸುತ್ತೇವೆ.

ಪ್ರಿಯಾಮಣಿ ಮತ್ತು ನಿಧಿ ಸುಬ್ಬಯ್ಯ ಚಿತ್ರದ ನಾಯಕಿಯರು. ಇವರೊಂದಿಗೆ ಬಾಲಿವುಡ್‍ನ ಜಾಕಿ ಶ್ರಾಫ್ ಮತ್ತು ನಮ್ಮ ಮೆಚ್ಚಿನ ರಂಗಾಯಣ ರಘು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸತ್ಯ ಹೆಗ್ಡೆಯವರ ಕ್ಯಾಮರಾ ಕೈಚಳಕವಿದ್ದು, ವಿ. ಹರಿಕೃಷ್ಣರ ಸಂಗೀತವಿದೆ.

ಚಿತ್ರದ ತಾರಾಬಳಗ ಮತ್ತು ಸಿಬ್ಬಂದಿ :

Movie Name : Anna Bond

Cast : Puneeth Rajkumar, Priyamani, Nidhi subbaiah , Rangayana Raghu, Jackie Shroff and others

Director : Soori

Music : V. Harikrishna

Cameraman : Sathya Hegde

Genre : Drama

Release Date : 18th Apr 2012

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech