Close X

ಮುಂಗಾರು ಮಳೆಯ ಬೆಡಗಿ ಪೂಜಾ ಗಾಂಧಿ ಬಣ್ಣದ ಬದುಕಿನಿಂದ ರಾಜಕೀಯದ ಬದುಕಿಗೆ

Pooja Gandhi joins to JD(S)ಮುಂಗಾರು ಮಳೆಯ ಬೆಡಗಿ ಪೂಜಾ ಗಾಂಧಿ,  ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಪಕ್ಷ ಜನತಾದಳ (ಜಾತ್ಯಾತೀತ)ವನ್ನು ಅಧಿಕೃತವಾಗಿ ಸೇರಿದ್ದಾರೆ. ಪೂಜಾಗಾಂಧಿ ಜನತಾದಳ ಪಕ್ಷಸೇರುವ ವಿಚಾರ ಅಚ್ಚರಿತರಿಸುವಂತದ್ದೇನಲ್ಲಾ. ಯಾಕೆಂದರೆ, ಕೆಲವು ದಿನಗಳಿಂದ ತಮ್ಮ ರಾಜಕೀಯ ಪ್ರವೇಶದ ಭಗ್ಗೆ ಪಕ್ಷದ ಕಛೇರಿಗೆ ಭೇಟಿಕೊಡುವ ಮೂಲಕ ಸಾಕಷ್ಟು ಸುಳಿವು ಕೊಟ್ಟಿದ್ದರು.

ಜನತಾದಳ ಪಕ್ಷ ಸೇರಿದ ನಂತರ ಪೂಜಾ ಗಾಂಧಿ ಮಾತನಾಡುತ್ತ ಪಕ್ಷಸೇರುವ ಕಾರಣ ಮತ್ತು ಉದ್ದೇಶವನ್ನು ವಿವರಿಸಿದರು. ಹೆಚ್. ಡಿ. ದೇವೆಗೌಡ ಮತ್ತು ಅವರ ಮಗ ಹೆಚ್. ಡಿ. ಕುಮಾರಸ್ವಾಮಿಯವರ ನಾಯಕತ್ವದ ಸ್ಪೂರ್ತಿ ಪಡೆದು ಪಕ್ಷವನ್ನು ಸೇರಿದ್ದಾರೆಂದು ಹೇಳಿದರು. ಪೂಜಾ ಗಾಂಧಿಯನ್ನು ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಬರಮಾಡಿಕೊಂಡರು. ಪೂಜಾ ಗಾಂಧಿಯನ್ನು ಎಂ. ಸಿ. ನಾಣಯ್ಯ, ಶಾಸಕಾಂಗ ಪರಿಷತ್ತಿನ ನಾಯಕರು, ಮತ್ತು ಶ್ರೀಮತಿ ಜ್ಯೋತಿರೆಡ್ಡಿ, ರಾಜ್ಯದ ಮಹಿಳಾ ವಿಂಗ್ ಮುಖ್ಯಸ್ಥೆ ಸ್ವಾಗತಿಸಿದರು.

ಪಕ್ಷಕ್ಕೆ ಪೂಜಾ ಗಾಂಧಿಯನ್ನು ತರುವ ಸಾಧನೆಯನ್ನು ಜ್ಯೋತಿ ರೆಡ್ಡಿಯವರು ಮಾಡಿದ್ದಾರೆ. ಪೂಜಾ ಗಾಂಧಿ ಜ್ಯೋತಿ ರೆಡ್ಡಿಯವರ ಮಗಳ ಆಪ್ತ ಸ್ನೇಹಿತೆ. ಹೀಗಾಗಿ ಜ್ಯೋತಿಯವರು ಪೂಜಾಳ ಮನವೊಲಿಸಲು ಸಹಾಯಕವಾಯಿತು.

“ಜನತಾದಳ (ಜಾತ್ಯಾತೀತ) ಸಾಮಾನ್ಯ ಜನರ ಪಕ್ಷವಾಗಿದ್ದು, ನಾನು ಈಗಾಗಲೇ ಸಮಾಜಿಕವಾಗಿ ಸಂಬಂಧಿಸಿದಂತೆ ಕೆಲಸ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡಿ ಅನುಭವವಿದೆ” ಎಂದು ಪೂಜಾಗಾಂಧಿ ನುಡಿದರು.

ನಟಿಮಣಿಯರಾದ ರಮ್ಯ, ಜಯಂತಿ, ತಾರಾ ಮತ್ತು ಶೃತಿ ರಾಜಕೀಯದಲ್ಲಿ ಈ ಮೊದಲೇ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech