Close X

ನಮ್ಮಣ್ಣ ಡಾನ್ ಚಿತ್ರವನ್ನು ಹಳ್ಳಿ ಹಳ್ಳಿಗಳಿಗೆ ಕೊಂಡೊಯ್ಯುತ್ತಿದ್ದಾರೆ ನಟ ನಿರ್ದೇಶಕ ರಮೇಶ್

namanna-don-kananda-movie-3ನಟ ನಿರ್ದೇಶಕ ರಮೇಶ್ ಅರವಿಂದ್ ತಮ್ಮ ಚಿತ್ರ ನಮ್ಮಣ್ಣ ಡಾನ್‌ನ ಪ್ರಚಾರವನ್ನು ವಿಭಿನ್ನವಾಗಿ ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಕೈಗೊಂಡಿದ್ದಾರೆ. ಮಾಮೂಲು ರೀತಿಯ ಪ್ರಚಾರವಲ್ಲದೇ, ಉತ್ತಮ ಹಾಸ್ಯವಿರುವ ಇಂತಹ ಚಿತ್ರವನ್ನು ಉತ್ತರ ಕರ್ನಾಟಕದ ಹಳ್ಳಿ ಜನರೂ ನೋಡಬೇಕೆಂದು ಈ ರೀತಿಯ ಪ್ರಚಾರ ಕೈಗೊಂಡಿದ್ದಾರೆ. ಈಗ ಸ್ವಲ್ಪ ದಿನಗಳ ಹಿಂದೆ ಚಿತ್ರದ ಧ್ವನಿಸುರಳಿ ಬಿಡುಗಡೆ ಗೊಂಡಿತ್ತು. ಈ ಚಿತ್ರ ತಯಾರಿಯಾಗಿದ್ದು, ಇನ್ನೂ ಹೆಚ್ಚು ಕಾಲ ಪ್ರಚಾರ ಮಾಡಿ ತೆರೆಯ ಮೇಲೆ ತೋರಿಸುವುದಾಗಿ ಹೇಳಿದ್ದಾರೆ ರಮೇಶ್.

ಚಿತ್ರದ ನಟರೂ ಮತ್ತು ತಂತ್ರಜ್ಞರನ್ನು ಟಿ.ವಿಯ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಅನುಮೋದಿಸುತ್ತ, ಒಂದು ರೀತಿಯಲ್ಲಿ ತಮ್ಮ ಚಿತ್ರವನ್ನು ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ರೀತಿಯ ಪ್ರಚಾರ ಮಧ್ಯವರ್ಗದ ಮತ್ತು ಟಿ.ವಿಗೆ ಮತ್ತು ದೂರದರ್ಶನ ಕಾರ್ಯಕ್ರಮಗಳಿಗೆ ಅಂಟಿಕೊಂಡಿರುವವರನ್ನು ಮಾತ್ರ ತಲುಪಬಹುದಾಗಿದೆ. ಹಾಗಾಗಿ ಬೇರೆಯ ರೀತಿ ಯೋಚಿಸುತ್ತ, ಹಳ್ಳಿ ಪ್ರದೇಶದ ಜನರನ್ನು ಆಕರ್ಷಿಸಲು ಕೆಲವು ತಂತ್ರಗಾರಿಕೆಯನ್ನು ರೂಪಿಸಿದ್ದೇನೆ ಎಂದರು ರಮೇಶ್.

ನಮ್ಮಣ್ಣ ಡಾನ್ ಚಿತ್ರದ ನಟ ನಟಿಯರೂ, ತಂತ್ರಜ್ಞರೂ ಉತ್ತರ ಕರ್ನಾಟಕದ ಅನೇಕ ಭಾಗಗಳನ್ನು ಪ್ರವಾಸ ಮಾಡುತ್ತಿದ್ದಾರೆ. ಗುಲ್ಬರ್ಗಾದಲ್ಲಿ ಟಾಂಗಾ ಓಡಿಸುವುದು, ಬಿಜಾಪುರದಲ್ಲಿ ವ್ಯಾಪಾರೋದ್ಯಮ ಮೇಳದಲ್ಲಿ ಪಾಲ್ಗೊಳ್ಳುವುದು, ಬಾದಾಮಿಯಲ್ಲಿ ಬನಶಂಕರಿ ಜಾತ್ರೆ, ಸವದತ್ತಿಯಲ್ಲಿ ಯಲ್ಲಮ್ಮನ ಜಾತ್ರೆ ಹೀಗೆ ನಾನಾ ಕಡೆಗಳಲ್ಲಿ ಪ್ರಚಾರ ಮಾಡುತ್ತಾ ಬಂದಿದ್ದಾರೆ. ಈ ಜಾತ್ರೆ ಮಂಗಳೂರು, ಹಾಸನ, ಹುಬ್ಬಳ್ಳಿ ಹೀಗೆ ಮುಂದುವರೆಯುವುದು ಎಂದು ರಮೇಶ್ ಹೇಳಿದರು.

ನಮ್ಮಣ್ಣ ಡಾನ್ ಚಿತ್ರವನ್ನು ರವಿ ಜೋಶಿ ನಿರ್ಮಿಸುತ್ತಿದ್ದು, ಮೋನ ಪರ್ವೇಶ್ ಮತ್ತು ಸನಾತಿನಿ ಚಿತ್ರದ ನಾಯಕಿಯರಾಗಿ ನಟಿಸಿದ್ದಾರೆ. ರಾಜು ತಾಳಿಕೋಟೆ, ಉಮೇಶ್, ಅಚ್ಯುತ್ ರಾವ್ ಮತ್ತು ಇನ್ನೂ ಮುಂತಾದವರನ್ನು ತನ್ನ ತಾರಾ ಬಳಗದಲ್ಲಿ ಹೊಂದಿದೆ. ಚಿತ್ರಕ್ಕೆ ಕೃಷ್ಣಕುಮಾರ್‌ರವರ ಕ್ಯಾಮೆರಾ ಕೈಚಳಕವಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech