Close X

ಮಲಯಾಳಂನ ಟ್ರಾಫಿಕ್ ಕನ್ನಡಕ್ಕೆ – ಕ್ರೇಜಿಸ್ಟಾರ್ ರವಿಚಂದ್ರನ್

Ravichandran remakes Malayalam Movie Trafficಒಂದು ವರ್ಷದ ಹಿಂದೆ 2011ರಲ್ಲಿ ಮಲಯಾಳಂನಲ್ಲಿ ಬಂದ ಚಿತ್ರ ಟ್ರಾಫಿಕ್ ಈಗ ಕನ್ನಡಕ್ಕೆ ರೀಮೇಕ್ ಮಾಡಲಿದ್ದಾರೆ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್. ರಾಜೇಶ್ ಪಿಳ್ಳೆ ನಿರ್ದೇಶಿಸಿದ, ಶ್ರೀನಿವಾಸನ್, ಬೋಬನ್, ವಿನೀತ್ ಶ್ರೀನಿವಾಸನ್, ಸಂಧ್ಯಾ ಹಾಗೂ ರಮ್ಯಾ ನೆಂಬೀಸನ್ ನಟಿಸಿರುವ ಚಿತ್ರ ಟ್ರಾಫಿಕ್ ಸೂಪರ್ ಡೂಪರ್ ಹಿಟ್ ಚಿತ್ರವಾಯಿತು.

ಮೂಲಗಳ ಪ್ರಕಾರ ರವಿಚಂದ್ರನ್ ಈ ಚಿತ್ರದ ರೀಮೇಕ್ ಮಾಡುವ ಆಸಕ್ತಿ ಬಹಳಷ್ಟು ತೋರಿಸಿದ್ದು, ತಮ್ಮ ಸ್ವಂತ ಬ್ಯಾನರ್ ಅಡಿಯಲ್ಲಿ ಚಿತ್ರ ತಯಾರಿಸಲು ತಯಾರಾಗಿದ್ದಾರೆ ಅಥವಾ ಬೇರೆ ಯಾವುದೇ ನಿರ್ಮಾಪಕರ ಅಡಿಯಲ್ಲಿ ಕೂಡ ತಯಾರಿಸಲು ಒಪ್ಪಿಗೆ ನೀಡಿದ್ದಾರೆ. ಸ್ಕ್ರಿಪ್ಟ್ ಸಾಕಷ್ಟು ಬಲವಾಗಿದ್ದು ಈ ಕಾರಣಕ್ಕೆ ಚಿತ್ರ ಉತ್ತಮ ಗುಣಮಟ್ಟದ್ದಾಗಿರುತ್ತದೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ ಟಾಪ್ ನಿರ್ಮಾಪಕ ಮುನಿರತ್ನ ಮತ್ತು ರವಿಚಂದ್ರನ್ ಕಾಂಬಿನೇಷನ್‌ನ ಒಂದು ಚಿತ್ರವನ್ನು ಸಾಧು ಕೋಕಿಲ ನಿರ್ದೇಶಿಸಲು ಸಜ್ಜಾಗುತ್ತಿದ್ದಾರೆ. ಸಾಧು ಸ್ಕ್ರಿಪ್ಟ್ ತಯಾರಿಕೆಯಲ್ಲಿ ನಿರತವಾಗಿದ್ದು, ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ರವಿಚಂದ್ರನ್ ಮಹೇಶ್ ಬಾಬು ನಿರ್ದೇಶನದ ಮತ್ತು ಅಣಜಿ ನಾಗರಾಜ್ ನಿರ್ಮಾಣದ “ಪರಮಶಿವ’ ಹೊರತುಪಡಿಸಿ ರವಿಚಂದ್ರನ್ ತನ್ನ ಎಲ್ಲಾ ಚಿತ್ರಗಳ ಚಿತ್ರೀಕರಣ ಬದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ಅವರ ಚಿತ್ರಗಳ ಎರಡು ಚಿತ್ರಗಳು ರವಿ ಶ್ರೀವತ್ಸ್ ನಿರ್ದೇಶನದ ‘ದಶಮುಖ” ಮ್ಟತ್ತು ನಟ ಮೋಹನ್ ನಿರ್ದೇಶನದ “ನರಸಿಂಹ”‘ ಎರಡು ಅಥವಾ ಮೂರು ವಾರಗಳ ಅಂತರದಲ್ಲಿ ತೆರೆ ಕಾಣಲು ನಿರೀಕ್ಷಿಸಲಾಗಿದೆ. ಕುಮಾರ್ “ನರಸಿಂಹ” ಚಿತ್ರದ ನಿರ್ಮಾಪಕ 17 ನೇ ಫೆಬ್ರವರಿ ಎಂದು ಚಿತ್ರ ಬಿಡುಗಡೆಗೆ ಯೋಜನೆ ಹೊಂದಿದ್ದಾರೆ ಎಂದು ಹೇಳುತ್ತಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech