Close X

ಲಕ್ಕಿ ಆಡಿಯೋ ಬಿಡುಗಡೆ ಸಮಾರಂಭ – ರಮ್ಯ ಮತ್ತು ರಾಧಿಕಾ ಸಮ್ಮಿಲನ

Lucky Kannada Movie Audio Releaseಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರನ್ನು ಮದುವೆಯಾದ  ನಂತರ ನಟಿ ರಾಧಿಕಾ ಅವರ ಮೊದಲ ಚಲನಚಿತ್ರ ತಯಾರಿಕೆಯ ’ಲಕ್ಕಿ’ ಚಿತ್ರದ ಧ್ವನಿಸುರಳಿ ಕಾರ್ಯಕ್ರಮವು ಬುಧವಾರ ಸಂಜೆ KSCA ಕ್ಲಬ್‍ನಲ್ಲಿ ಅದ್ದೂರಿಯಾಗಿ ನೆರವೇರಿತು. ಸಮಾರಂಭದಲ್ಲಿ ರಮ್ಯ, ಯಶ್, ರಾಧಿಕಾ, ರಾಧಿಕಾಳ ತಂದೆ ತಾಯಿ, ರಾಧಿಕಾಳ ಮಗು ಶಮಿತಾ ಕುಮಾರಸ್ವಾಮಿ, ನಿರ್ದೇಶಕ ಸೂರಿ, ಗೀತರಚನೆ ಕಾರ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು. ಹೆಚ್. ಡಿ. ಕುಮಾರಸ್ವಾಮಿಯವರು ಬರಲಾಗದೆ ಹೋದರೂ, ರಾಧಿಕಾ ಮತ್ತು ತಮ್ಮ ಮಗಳ ರಕ್ಷಣೆಗಾಗಿ ನಾಲ್ಕುಜನ ಅಂಗರಕ್ಷಕರನ್ನು ಕಳುಹಿಸಿದ್ದರು.

ರಾಧಿಕಾ ಐದು ವರ್ಷಗಳ ನಂತರ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಈ ಐದು ವರ್ಷಗಳಲ್ಲಿ ಅವರು ಮಾಜಿ ಪ್ರಧಾನಿ ಹೆಚ್. ಡಿ. ದೇವೆಗೌಡರ ಸೋಸೆಯಾದರು (ಅನಧಿಕೃತ).  ಹೆಚ್. ಡಿ. ಕುಮಾರಸ್ವಾಮಿಯವರು ಪ್ರಸ್ತುತ ಲೋಕಸಭಾ ಸದಸ್ಯರಾಗಿದ್ದು ಜೊತೆಗೆ ಸಿನಿಮಾ ನಿರ್ಮಾಣ, ವಿತರಣೆ ಮುಂತಾದವನ್ನು ಹೊಂದಿದ್ದಾರೆ. ಈ ಚಿತ್ರ ’ಲಕ್ಕಿ’ ಕೂಡ ಅವರ ನಿರ್ಮಾಣ ಸಾರಥ್ಯದಲ್ಲೆ ನಡೆಯುತ್ತಿದೆ.

ಚಿತ್ರದ ಧ್ವನಿಸುರಳಿಯನ್ನು ಹೆಚ್. ಡಿ. ಕುಮಾರಸ್ವಾಮಿ ಮತ್ತು ರಾಧಿಕಾರ ಮುದ್ದಾದ ಮಗಳು ಶರ್ಮಿಕ ಕುಮಾರಸ್ವಾಮಿ ಬಿಡುಗಡೆ ಮಾಡಿ ತಾಯಿ ರಾಧಿಕಾ ಮತ್ತು ನಟಿ ರಮ್ಯಳಿಗೆ ನೀಡಿದಳು. ರಾಧಿಕಾ ಸುದ್ಧಿಗೋಷ್ಟಿಯೊಂದಿಗೆ ಮಾತನಾಡುತ್ತ : “ಸಿನಿಮಾ ನಿರ್ಮಾಣದ ಸಮಯದಲ್ಲಿ ರಮ್ಯ ಮತ್ತು ಯಶ್ ಬಹಳ ಸಹಕಾರ ನೀಡಿದ್ದರಿಂದ ನನಗೆ ಯಾವ ಆತಂಕವೂ ಆಗಲಿಲ್ಲ, ಅವರಿಗೆ ನನ್ನ ಕೃತಜ್ಞತೆಗಳು”. ಎಂದು ಹೇಳಿದರು. ಒಂದು ಒಳ್ಳೆ ಕಥೆಸಿಕ್ಕಲ್ಲಿ ಮತ್ತೆ ನಟಿಸುವುದಾಗಿ ಹೇಳಿದರು. ರಮ್ಯಳ ಒಪ್ಪಿಗೆಯ ಮೇರೆಗೆ ರಾಧಿಕಾ ಈ ಚಿತ್ರವನ್ನು ಮಾಡಲು ಕೈಗೆತ್ತಿಕೊಂಡರೆಂದು ಈ ಸಂದರ್ಭದಲ್ಲಿ ಸೂಚಿಸಿದರು.

ರಮ್ಯ ತಮ್ಮ ಭಾಷಣದಲ್ಲಿ ’ಲಕ್ಕಿ’ ಚಿತ್ರದ ವಿಷಯವು ನನ್ನ ಜೀವನದ ಭಾಗವಾಗಿದೆ ಎಂದು ನುಡಿದರು.

ಚಿತ್ರಕ್ಕೆ ಅರ್ಜುನರ ಸಂಗೀತ, ಜಯಂತ್ ಕಾಯ್ಕಿಣಿ ಮತ್ತು ಯೋಗರಾಜ್ ಭಟ್‌ರ ಹಾಡುಗಳು, ಸೂರಿಯ ನಿರ್ದೇಶನವಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech