Close X

ಕೋಮಲ್‌ನ ಪ್ಯಾರ್‌ಗೆ ಆಗ್ಬಿಟ್ಟಿದೆ ಹಾಡು youtube ನಲ್ಲಿ ಕೊಲವರಿ ಹಾಡಿಗೆ ಸೆಡ್ಡು ಹೊಡೆಯುತ್ತಿದೆ

komal kumar in Govindaya Namaha songಚಿತ್ರದ ಬಿಡುಗಡೆಗೆ ಮೊದಲೆ ದಾಖಲೆಯನ್ನು ಬರೆಯುತ್ತಿದೆ ಕನ್ನಡ ಚಿತ್ರ ಗೋವಿಂದಾಯ ನಮಃ. ಇದನ್ನು ನೋಡಿದರೆ, ತಮಿಳಿನ ಕೊಲವೆರಿ ಹಾಡು ಜ್ಞಾಪಕಕ್ಕೆ ಬರುತ್ತದೆ. ಈ ಹಾಡು ಕೂಡ ಚಿತ್ರದ ಬಿಡುಗಡೆಗೆ ಮೊದಲೆ ದಾಖಲೆಯನ್ನು ಬರೆಯಿತು. ಅದರ ಹಾದಿಯಲ್ಲೇ ಈ ಗೋವಿಂದಾಯ ನಮಃ ಚಿತ್ರದ ಹಾಡು “ಪ್ಯಾರ್‌ಗೆ ಆಗ್ಬಿಟ್ಟಿದೆ” ಹಾಡು ಕೂಡ. ಈ ಹಾಡು youtube ನಲ್ಲಿ ಭಾನುವಾರದವರೆಗೆ ಐವತ್ತು ಸಾವಿರ ವೀಕ್ಷಣೆ ಕಂಡಿದೆ. ಚಿತ್ರವು ಫೆಬ್ರವರಿ ಮೂರನೇ ವಾರದಲ್ಲಿ ಬಿಡುಗಡೆಯ ನಿರೀಕ್ಷೆಯಲ್ಲಿದೆ.

ಪವನ್ ವಡೆಯರ್ ತನ್ನ ಮೊದಲ ಚೊಚ್ಚಲ ನಿರ್ದೇಶನದ ಚಿತ್ರ ಗೋವಿಂದಾಯ ನಮಃ. ನಿರ್ಮಾಪಕ ಸುರೇಶ್, ಜನಪ್ರಿಯ ಹಾಸ್ಯ ನಾಯಕ ಕೋಮಲ್ ಕುಮಾರ್ ಮತ್ತು ಗುರುಕಿರಣ್ ಸಂಗೀತ ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಕೋಮಲ್ ಕುಮಾರ್ ಜೊತೆ ನಾಲ್ಕು ನಾಯಕಿಯರು ನಟಿಸಿದ್ದಾರೆ.

“ಪ್ಯಾರ್‌ಗೆ ಆಗ್ಬಿಟ್ಟಿದ್ದೆ, ನಮ್ದುಕ್ಕೆ ಜಾನ್‌ಗೆ ಹೋಗ್ಬಿಟ್ಟಿದ್ದೆ” ಹಾಡು youtubeನಲ್ಲಿ ಕೇವಲ ಮೂರು ದಿನಗಳಲ್ಲಿ 65000 ವೀಕ್ಷಕರನ್ನು ಆಕರ್ಷಿಸಿದ್ದು, ಇದು ತಮಿಳಿನ ಕೊಲವೆರಿ ಹಾಡಿನ ನಂತರದ ಸ್ಥಾನವನ್ನು ಪಡೆದಿದೆ. ಈ ಹಾಡನ್ನು ಸ್ವತಃ ನಿರ್ದೇಶಕ ಪವನ್ ವಡೆಯರ್ ಬರೆದಿದ್ದು, ಚೇತನ್ ಮತ್ತು ಇಂದು ನಾಗರಾಜ್ ಹಾಡಿದ್ದಾರೆ. ಚಿತ್ರದ ಹಾಡನ್ನು ಬಿಜಾಪುರದ ಕೋಟೆ – ಇಬ್ರಾಹಿಂ ರೋಜಾ ಮತ್ತು ಸುತ್ತಮುತ್ತಲಿನ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡಿನಲ್ಲಿ ಕೋಮಲ್, ಪರುಲ್ ಮತ್ತು ಸಹ ನೃತ್ಯಗಾರರನ್ನು ಒಳಗೊಂಡಿದೆ.

ಇಲ್ಲಿದೆ ಆ ಹಾಡಿನ ಒಂದು ಜಲಕ್. ನೀವೂ ಕೇಳಿ ಆನಂದಿಸಿ……

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech