Close X

ಕೋಮಲ್‍ನ ಕಾಮಿಡಿ ಹೊಂದಿರುವ ರಾಧಿಕಾನ ಗಂಡ ಚಿತ್ರವು ಶೂಟಿಂಗ್ ಮುಗಿಸಿದೆ

radhikan-ganda-komal-kumarರಾಧಿಕಾನ ಗಂಡ ಚಿತ್ರವು ತನ್ನ ಶೂಟಿಂಗ್‌ನ್ನು ಮುಗಿಸಿದೆ. ಈ ಚಿತ್ರದ ನಾಯಕನಟರಾಗಿ ಕೋಮಲ್ ಕುಮಾರ್ ಅಭಿನಯಿಸುತ್ತಿದ್ದಾರೆ. ಇದೊಂದು ಕಾಮಿಡಿ ಮತ್ತು ಆಕ್ಷನ್ ಒಳಗೊಂಡ ಚಿತ್ರವಾಗಿದೆ. ಕುತೂಹಲಕಾರಿಯಂದರೆ ಚಿತ್ರ ಶೂಟಿಂಗ್ ಮುಗಿಸಿದರೂ, ಒಮ್ಮೆಯು ಮೀಡಿಯಾನ ಮುಂದೆ ಬಂದಿಲ್ಲ. ಈ ಚಿತ್ರವನ್ನು ‘Shantha Pictures and Confident Group’ ಜೊತೆಯಾಗಿ ನಿರ್ಮಿಸುತ್ತಿದೆ. ಇದೀಗ ಡೈಲಾಗ್ ರೆಕಾರ್ಡಿಂಗ್ “Kari Subbu Balaji Digital studio” ನಲ್ಲಿ ನಡೆಯುತ್ತಿದೆ.

Hdk-radhika

ರಾಧಿಕಾ ಹೆಸರು ಚಿತ್ರದ ಶೀರ್ಷಿಕೆ “ರಾಧಿಕಾನ ಗಂಡ” ನಲ್ಲಿ ಕಾಣಿಸಿಕೊಂಡಿದ್ದರಿಂದ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ದೀರ್ಘಕಾಲದವರೆಗೆ ಚಿತ್ರದ ಶೀರ್ಷಿಕೆ ಹೆಸರನ್ನು ಗೋಪ್ಯವಾಗಿ ಇಡಲಾಗಿತ್ತು. ನಿಜ ಜೀವನದಲ್ಲಿ ರಾಧಿಕಾನ ಗಂಡ ಎಂದರೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಎಂದರ್ಥವಾಗುತ್ತದೆ. ಈ ಕಾರಣಕ್ಕೆ ಚಿತ್ರದ ಟೈಟಲ್ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಈಗ ರಾಧಿಕಾ ಮತ್ತು ಕುಮಾರಸ್ವಾಮಿಯವರ ಸಂಬಂಧ ಮುಕ್ತವಾಗಿರುವುದರಿಂದ ಚಿತ್ರದ ತಯಾರಕರಿಗೆ ಯಾವುದೇ ಗೊಂದಲವಿಲ್ಲ.

ಆದರೂ ಇಂತಹ ವಿಷಯ ಕುಮಾರಸ್ವಾಮಿ ಮತ್ತು ರಾಧಿಕಾ ಬೆಂಬಲಿಗರಲ್ಲಿ ಆತಂಕ ಉಂಟುಮಾಡುವ ಅಂಶವಾಗಿದೆ. ಕೋಮಲ್ ಕುಮಾರ್ ಚಿತ್ರದ ನಾಯಕ ನಟ ಆ ರೀತಿಯ ಯಾವುದೇ ಅಂಶ (ಕುಮಾರಸ್ವಾಮಿ ಮತ್ತು ರಾಧಿಕಾ ಸಂಬಂಧ) ಇಲ್ಲ ಎಂದಿದ್ದಾರೆ. ಆ ರೀತಿಯ ಶೀರ್ಷಿಕೆ ಚಿತ್ರದ ಮೌಲ್ಯವನ್ನು ಹೆಚ್ಚಿಸುತ್ತದೆ ಮತ್ತು ಥಿಯೇಟರ್‌ಗೆ ಪ್ರೇಕ್ಷಕರನ್ನು ಕರೆತರುತ್ತದೆ ಎಂದಿದ್ದಾರೆ. ಪ್ರೇಕ್ಷಕರು ಥಿಯೇಟರ್ ಒಳಗೆ ಬಂದಾಗ ಅವರಿಗೆ ತಿಳಿಯುತ್ತದೆ ಇದೊಂದು ಪಕ್ಕಾ ಕಾಮಿಡಿ ಚಿತ್ರ ಮತ್ತು ಆ ರೀತಿಯ (ಕುಮಾರಸ್ವಾಮಿ ಮತ್ತು ರಾಧಿಕಾ ಸಂಬಂಧ) ವಿಷಯ ಯಾವುದು ಇಲ್ಲ ಎಂದು ಎಂದಿದ್ದಾರೆ ಕೋಮಲ್.

ಮುರುಗನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಚಿತ್ರಕ್ಕೆ ಐದು ಹಾಡುಗಳನ್ನು ಸಂಯೋಜಿಸಿದ್ದಾರೆ. ರವಿಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಕೋಮಲ್ ಕುಮಾರ್‌ಗೆ ನಾಯಕಿಯಾಗಿ ಪೂರ್ಣ ಜೊತೆಯಾಗಿದ್ದಾರೆ. ಆರ್ಯ, ಪೂರ್ಣಕುಮಾರ್, ಸುದರ್ಶನ್, ಕುರಿಗಳು ಪ್ರತಾಪ್ ಇತರೆ ಪಾತ್ರವರ್ಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech