Close X

ಕೋ ಕೋ ಕೋಳಿ ಕೋತಿ ಚಿತ್ರದ ವಿಜಯದ ಯಾತ್ರೆ ಇಂದಿನಿಂದ ಆರಂಭ !

ko-ko-koli-kothi-goes-on-victory-tourಉತ್ತಮ ಗುಣಮಟ್ಟ ಮತ್ತು ಸಂಕ್ಷಿಪ್ತ ಚಿತ್ರಕಥೆ ಹೊಂದಿರುವ ಕನ್ನಡ ಚಿತ್ರ ಕೋ ಕೋ ಕೋಳಿ ಕೋತಿ ತನ್ನ ಮೂರನೇ ವಾರದಲ್ಲಿ 75ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿಜೃಂಭಿಸುತ್ತಿದೆ. ಇದನ್ನು ಸಾಭೀತುಪಡಿಸಿದ ಪ್ರೇಕ್ಷಕರಿಗೆಲ್ಲ ಅಭಿನಂದನೆಗಳನ್ನು ತಿಳಿಸಲು ಇಂದಿನಿಂದ ಚಿತ್ರ ತಂಡವು ಪ್ರೇಕ್ಷಕರನ್ನು ಮುಖಾಮುಖಿಯಾಗಿ ಭೇಟಿಯಾಗಲು ವಿವಿಧ ಸ್ಥಳಗಳಿಗೆ ತಮ್ಮ ಕಲಾವಿದರ ತಂಡದೊಂದಿಗೆ ಭೇಟಿನೀಡಲಿದೆ.

‘ಕೋ… ಕೋ…. ಕೋಳಿ ಕೋತಿ’ ನಿರ್ದೇಶಕ ಆರ್ ಚಂದ್ರು ನಟರುಗಳಾದ ಶ್ರೀನಗರ ಕಿಟ್ಟಿ, ಸಂಜನಾ, ಬುಲೆಟ್ ಪ್ರಕಾಶ್ 9.30ಕ್ಕೆ ರಾಮನಗರದ ಥೆಯೇಟರಿಗೆ ಭೇಟಿನೀಡಲಿದ್ದಾರೆ. ಇದಾದ ನಂತರ 2 ಗಂಟೆಗೆ ಮಂಡ್ಯ, 4.30 ಗಂಟೆಗೆ ಮೈಸೂರು ಮತ್ತು 7.30ಕ್ಕೆ ಹಾಸನಕ್ಕೆ ಭೇಟಿನೀಡುತ್ತ ತನ್ನ ಮೊದಲ ದಿನ ಪ್ರಯಾಣ ಕೊನೆಗೊಳಿಸುವುದು.

ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸಲು ಇದೊಂದು ಉತ್ತಮ ಸದಾವಕಾಶವಾಗಿದೆ ಎಂದು ನಿರ್ಮಾಪಕ ಭಾಸ್ಕರ್ ಮತ್ತು ಕಾರ್ಯಕಾರಿ ನಿರ್ಮಾಪಕ ಭರಣಿ ಮಿನೆರಲ್ಸ್‌ನ ಆದಿನಾರಾಯಣ ಹೇಳುತ್ತಾರೆ.

ಇದು ಪ್ರವಾಸದ ಮೊದಲ ಹಂತವಾಗಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಿಗೆ ಮುಂದುವರಿಯುತ್ತದೆ ಎಂದಿದ್ದಾರೆ ನಿರ್ದೇಶಕ ಆರ್. ಚಂದ್ರು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech