Close X

ಕಿಚ್ಚ ಸುದೀಪ್ ನೇತೃತ್ವದ KB CCL season 2ನ ಸೆಮಿ ಫೈನಲ್‌ನತ್ತ

KB-pradeep-fifty-against-Mumbai-Heroesಕರ್ನಾಟಕ ಬುಲ್ಡೋಜರ್ಸ್ ತನ್ನ ಎರಡನೇ ಗೆಲುವನ್ನು CCL season 2 ನಲ್ಲಿ ಮುಂಬೈ ಹೀರೋಸ್ ವಿರುದ್ಧ ಭಾನುವಾರ ಸಾಧಿಸಿದೆ. ಇದಕ್ಕೆ ಮೊದಲು ಶನಿವಾರ ಕೆ.ಬಿ ತನ್ನ season 1 ವೈರಿ ಚೆನೈ ರೈನೋಸ್ ವಿರುದ್ಧ ಬಹಳ ಹೋರಾಟದ ಪ್ರದರ್ಶನ ನೀಡಿಯೂ ಕೊನೆಯ ಎಸೆತದಲ್ಲಿ ಸೋತಿತ್ತು. ಈ ಎರಡು ಪಂದ್ಯಗಳು ನಿಕಟವಾದ ಹೋರಾಟ ಕಂಡಿದ್ದು, ಯಾವುದೇ ಅಂತರಾಷ್ಟ್ರೀಯ ಪಂದ್ಯಗಳಿಗೂ ಮೀರಿದ್ಧು ಎಂದು ತೋರಿಸಿತು. KSCA ಕ್ರೀಡಾಂಗಣದಲ್ಲಿ ನಡೆದ ಎರಡೂ ಪಂದ್ಯಗಳು ಕೊನೆಯವರೆಗೂ ರೋಚಕತೆಯನ್ನು ಉಂಟುಮಾಡಿತ್ತು.

ಭಾನುವಾರ ರಾತ್ರಿ ಕರ್ನಾಟಕ ಬುಲ್ಡೊಜರ್ಗಳು 13 ರನ್‌ಗಳ ಜಯ ಸಾಧಿಸಿ ಮುನ್ನೆಡೆದು ಫೆಬ್ರವರಿ 5 ರಂದು ಕೊಚ್ಚಿನ್ ಸ್ಟ್ರೈಕರ್ ವಿರುದ್ಧ ಸೆಣಸಲಿದ್ದಾರೆ. ಕ್ಯಾಚ್‌ಗಳನ್ನು ಬಿಟ್ಟರೂ ಕೊನೆಗೆ ಬೌಂಡರಿಗಳಲ್ಲಿ ರನ್‌ ತಡೆದ್ದದ್ದರಿಂದ ಕರ್ನಾಟಕ ಬುಲ್ಡೋಜರ್ಸ್ ಜಯ ಸಾಧಿಸುವಲ್ಲಿ ಯಶಸ್ವಿಯಾದರು.

ಕರ್ನಾಟಕ ಬುಲ್ಡೋಜರ್ಸ್ ಮೊದಲು ಬ್ಯಾಟಿಂಗ್ ಮಾಡಿ ತನ್ನ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 168 ರನ್‌ಗಳನ್ನು ಮಾಡಿತು. ಪ್ರದೀಪ್ 57, ರಾಜೀವ್ 21, Dhruv 28 ಮತ್ತು ಕಾರ್ತಿಕ್ 22 ಗಳಿಸಿದರು. ಇದಕ್ಕೆ ಉತ್ತರವಾಗಿ ಮುಂಬೈ ಹೀರೋಸ್ ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಉತ್ತಮವಾಗಿಯೇ ಇತ್ತು. ಆದರೆ, ಕೊನೆಯಲ್ಲಿ ಮುಗ್ಗರಿಸಿತು. ಮುಂಬೈ ಹೀರೋ 20 ಓವರ್‌ಗಳಲ್ಲಿ 155 ರನ್ ಗಳಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 13 ರನ್‌ಗಳ ಸೋಲನ್ನು ಕಂಡಿತು. ಕರ್ನಾಟಕ ಬುಲ್ಡೊಜರ್ಗಳು ಪರ ಪ್ರದೀಪ್, ಅಭಿಮನ್ಯು ಮತ್ತು ಸುಧೀರ್ ತಲಾ 2 ವಿಕೆಟ್ಗಳು ಗಳಿಸಿದರು.

ಇದರೊಂದಿಗೆ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ CCL II ನೇ ಅಧ್ಯಾಯದ ಸೆಮಿ ಫೈನಲ್‌ನಲ್ಲಿ ಸ್ಥಾನವನ್ನು ಗಳಿಸುವ ಎಲ್ಲಾ ಸಾಧ್ಯತೆಗಳು ಇನ್ನೂ ಜೀವಂತವಾಗಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech