Close X

ನಿರ್ದೇಶಕ ಹರ್ಷಾ ಸುದೀಪ್‌ರನ್ನು ತಮ್ಮ ಹೊಸ ಚಿತ್ರದಲ್ಲಿ ನಿರ್ದೇಶಿಸಲಿದ್ದಾರೆ

sudeep-harshaಖ್ಯಾತ ನೃತ್ಯ ನಿರ್ದೇಶಕ ಹರ್ಷ ಈಗ ನಿರ್ದೇಶಕರಾಗಿದ್ದು, ಅವರ ಮೂರನೇ ಚಿತ್ರ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಚಿಂಗಾರಿ” ಫೆಬ್ರವರಿ 3 ರಂದು ಬಿಡುಗಡೆ ಯಾಗಲಿದೆ. ಇದರೊಂದಿಗೆ ತಮ್ಮ ಗುರು ಕಿಚ್ಚ ಸುದೀಪ್ ಹೊಸ ಜವಾಬ್ದಾರಿ ನೀಡುತ್ತಿದ್ದಾರೆ. ಹರ್ಷ ಸುದೀಪನನ್ನು ನಿರ್ದೇಶಿಸಲಿದ್ದು, ಚಿತ್ರವನ್ನು ಎನ್. ಕುಮಾರ್ ನಿರ್ಮಿಸಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಮಾರ್ಚ್ ಮೊದಲ ವಾರದಲ್ಲಿ ಅಥವಾ ಮಹಾಶಿವರಾತ್ರಿಯಂದು ಶುರುಮಾಡಲು ನಿರ್ದರಿಸಿದ್ದಾರೆ.

ಚಿತ್ರದ ಕಥೆ ತಯಾರಾಗುತ್ತಿದ್ದು, ತಮಿಳು ಮೂಲದ ಲೇಖಕ ಚಿತ್ರದ ಕಥೆ ಹಾಗೂ ಸ್ಕ್ರಿಪ್ಟ್ ಬರೆಯುವುದರಲ್ಲಿ ನಿರತರಾಗಿದ್ದಾರೆ ಎಂದರು. ಏತನ್ಮದ್ಯೆ, ಫೆಬ್ರವರಿ 15ರಿಂದ ಸುದೀಪ್ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುವ ವರದನಾಯಕ ಚಿತ್ರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರವನ್ನು ಮಾಡುತಲಿದ್ದು, ಚಿರಂಜೀವಿ ಸರ್ಜ್ ಮತ್ತು ನಿಕಿಶಾ ಪಟೇಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ನಟ ಸಾಯಿ ಕುಮಾರ್ ಮತ್ತು ರವಿಶಂಕರ್ ಸಹೋದರ ಅಯ್ಯಪ್ಪ ನಿರ್ದೇಶಿಸುತ್ತಿದ್ದಾರೆ. ಮೂಲಗಳ ಪ್ರಕಾರ ಸುದೀಪ್ 15 ದಿನಗಳ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದ್ದಾರಂತೆ. ಇನ್ನೂ ಸುದೀಪ್‌ಗೆ ನಾಯಕಿಯ ಹುಡುಕಾಟದಲ್ಲಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech