Close X

ಕ್ರೇಜಿ ಲೋಕ ಚಿತ್ರದ ಧ್ವನಿಸುರಳಿ ಸ್ವಲ್ಪ ಕ್ರೇಜಿಯಾಗಿಯೇ ಸರ್ಕಸ್‌ನಲ್ಲಿ ಬಿಡುಗಡೆಗೊಂಡಿತು

crazy_Loka_Audio_Releaseಭಾರತ ಸಿನಿಮಾ ರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ಚಿತ್ರದ ಧ್ವನಿಸುರಳಿಯನ್ನು ಸರ್ಕಸ್‌ನಲ್ಲಿ ಬಿಡುಗಡೆ ಮಾಡಿದ ಖ್ಯಾತಿಗೆ ಕನ್ನಡ ಚಿತ್ರ “ಕ್ರೇಜಿ ಲೋಕ” ಸಾಕ್ಷಿಯಾಯಿತು. ಇದನ್ನ ನೋಡಿದರೆ ನಮಗೆ ನೆನಪಾಗುವುದು, ಹಿಂದಿ ಚಿತ್ರ “ಮೆರಾ ನಾಮ್ ಜೋಕರ್”. ಈ ಚಿತ್ರವು ತನ್ನ ಶೂಟಿಂಗ್‌ನ್ನು ಸರ್ಕಸ್‌ ಕ್ಯಾಂಪ್‌ನಲ್ಲಿ ಮಾಡಿತ್ತು. ಶನಿವಾರ ಮಧ್ಯಾಹ್ನ ಕವಿತಾ ಲಂಕೇಶ್ ಕ್ರೇಜಿ ಲೋಕ ಚಿತ್ರದ ನಿರ್ದೇಶಕಿ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ ಜೆಮಿನಿ ಸರ್ಕಸ್‌ನಲ್ಲಿದ್ದರು. ಚಿತ್ರಕ್ಕೆ ಮಣಿರತ್ನಂ ಖದ್ರಿಯವರ ಸಂಗೀತವಿದೆ.

ಧ್ವನಿಸುರಳಿ ಕಾರ್ಯಕ್ರಮವು, ಸಂಜೆಯ ಐದುಗಂಟೆ ಶೋ ಶುರುವಾಗುವುದಕ್ಕೆ ಮೊದಲೆ ಬಿಡುಗಡೆ ಗೊಂಡಿತು. ಚಿತ್ರದ ಧ್ವನಿಸುರಳಿಯನ್ನು ಸರ್ಕಸ್‌ನ ಆನೆಯೊಂದು ಬಿಡುಗಡೆ ಮಾಡಿತು. ಪತ್ರಕರ್ತರ ಪ್ರಶ್ನೆಗೆ – “ಈ ಕಲ್ಪನೆ ಕ್ರೇಜಿ ಸ್ಟಾರ್ ರವಿಚಂದ್ರನ್ ರವರದ್ದ ?” ಉತ್ತರಿಸಿದ ಕವಿತಾ ಲಂಕೇಶ್, ಈ ಸೃಜನಶೀಲನ ಕಲ್ಪನೆ ತಮ್ಮದೆ ಎಂದು ಹೇಳಿದರು. ಇದನ್ನು ತಾವೇ ಸ್ವತಃ ಕಲ್ಪಿಸಿಕೊಂಡದ್ದು ಎಂದರು.

ಧ್ವನಿಸುರಳಿ ಸಮಾರಂಭಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್‌ರವರನ್ನು ಬಿಟ್ಟು, ಡಿಸ್ಟ್ರಿಬ್ಯೂಟರ್ ಬಾಷಾ, confident groupನ ಸುಂದರ್ ಮತ್ತು ಸುಮನ್, ನಟಿ ಹರ್ಷಿಕಾ ಪೂನಚ್ಚ, ಮಹೇಶ್ ಕೊಥಾರಿ, ಸಂಗೀತ ಸಂಯೋಜಕ ಮಣಿಕಾಂತ್ ಖದ್ರಿ, ಪ್ರಿಯಾಂಕ ಬುಲ್‌ಗನ್ನವರ್, ಸೂರ್ಯ, ರವಿಕುಮಾರ್, ಜಿ ತುಲಸೀರಾಮ್ ನಾಯ್ಡು ಮುಂತಾದವರು ಪಾಲ್ಗೊಂಡಿದ್ದರು.

ಈ ಚಿತ್ರದ ಬಜೆಟ್ 6 ಕೋಟಿ ಎಂದು confident groupನ ಸುಮನ್ ಬಹಿರಂಗಪಡಿಸಿದರು. ಈ ಮೊದಲು ರೂ. 33 ಕೋಟಿಯನ್ನು ಮಲಯಾಳಂನ ಚಿತ್ರಕ್ಕೆ ಬಂಡವಾಳ ಹೂಡಿದ್ದರು ಎಂದು ಬಹಿರಂಗಪಡಿಸಿದರು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech