Close X

ಛಾಲೆಂಜಿಗ್ ಸ್ಟಾರ್‍ ದರ್ಶನ್‍ರ ’ಸಾರಥಿ’ಗೆ ನೂರರ ಸಂಭ್ರಮ – ಸೋಮವಾರ 16ಕ್ಕೆ ಅದ್ದೂರಿ ಸಮಾರಂಭ

sarathi-darshanಅಂತೂ ಇಂತೂ ಛಾಲೆಂಜಿಗ್ ಸ್ಟಾರ್ ದರ್ಶನ್ ತಮ್ಮ ವಿವಾಧದ ಸುಳಿಯಿಂದ ಹೊರ ಬಂದು ಜಯಿಸಿದ್ದಾರೆ. ಸಾರಥಿ ನೂರು ದಿನಗಳ ಅದ್ದೂರಿ ಪ್ರದರ್ಶನವನ್ನು ಕಂಡು ಇನ್ನೂ ಮುನ್ನುಗುತ್ತಿದೆ. ಈ ಚಿತ್ರದ ಬಿಡುಗಡೆ ಸಮಯದಲ್ಲಿ, ದರ್ಶನ್ ದೊಡ್ಡ ವಿವಾದಕ್ಕೆ ಸಿಲುಕಿದ್ದು ನಿಮಗೆಲ್ಲ ತಿಳಿದಿರುವ ವಿಷಯವೇ. ಆ ಸಮಯದಲ್ಲಿ, ದರ್ಶನ್ ಸ್ಟಾರ್‍ ಇನ್ನೇನು ಬಿದ್ದೇ ಹೋಯಿತು ಅನ್ನುವಷ್ಟರಲ್ಲಿ, ದರ್ಶನ್ ಸಾರಥಿ ಚಿತ್ರದೊಂದಿಗೆ ತಮ್ಮ ಸ್ಟಾರ್ ಇನ್ನೂ ಹೆಚ್ಚಾಗಿದೆಯೆಂದು ಈ ಮೂಲಕ ಸಾಬೀತು ಮಾಡಿದ್ದಾರೆ.

ಸಾರಥಿ ಚಿತ್ರವು 100 ದಿನಗಳಲ್ಲಿ ನಿರ್ಮಾಪಕ ಕೆ. ವಿ. ಸತ್ಯಪ್ರಕಾಶ್‍ರವರಿಗೆ ರೂ. 20 ಕೋಟಿ ಸಂಗ್ರಹಿಸಿಕೊಟ್ಟಿದ್ದು, ಇನ್ನೂ ಅದ್ದೂರಿ ಪ್ರದರ್ಶನವನ್ನು ಕಾಣುತ್ತಿದೆ. 100 days ಸಂಭ್ರಮವನ್ನು ವಿಜಯನಗರ ಬಸ್ ಡಿಪೋ ಬಳಿಯಿರುವ ಬಂಟ್ಸ್ ಸಂಘದ ದೊಡ್ಡ ಹಾಲ್‍ನಲ್ಲಿ ಇದೇ 16th ಸೋಮವಾರ ಆಚರಿಸುತ್ತಿದೆ.

ಇದೇ ಸಮಾರಂಭದಲ್ಲಿ ತೆರೆಯ ಹಿಂದೆ ಹಾಗೂ ಮುಂದೆ ಶ್ರಮಿಸಿದ ಎಲ್ಲರಿಗೂ ಶ್ಲಾಘನೀಯ ಸ್ಮರಣೀಯ ಟ್ರೋಫಿಗಳನ್ನು ಕನ್ನಡ ಸಿನಿಮಾ ಉದ್ಯಮದ ದೊಡ್ಡ ಘಟಾನುಘಟಿಗಳಿಂದ ಪ್ರಸ್ತುತ ನಡೆಯಲಿದೆ.

ದಿನಕರ್ ತೂಗುದೀಪ್ ನಿರ್ದೇಶಿಸಿದ ದರ್ಶನ್ ಮತ್ತು ದೀಪಾ ಸನ್ನಿಧಿಯ ಮುಖ್ಯಭೂಮಿಕೆಯಲ್ಲಿ ನಟಿಸಿ, ವಿ. ಹರಿಕೃಷ್ಣರ ಸಂಗೀತ ಮತ್ತು ಎ. ವಿ. ಕೃಷ್ಣಕುಮಾರ್ ಛಾಯಗ್ರಹಣವಿರುವ ಸಾರಥಿ ಅದ್ದೂರಿ 100 ದಿನಗಳ ಪ್ರದರ್ಶನವನ್ನು ನರ್ತಕಿ ಮತ್ತು ರಾಕ್‍ಲೈನ್ ಸಿನಿಮಾ ಮಂದಿರದಲ್ಲಿ ಕಂಡಿದೆ. ತುಮಕೂರು, ತಿಪಟೂರು, ಮೈಸೂರು, ಮಂಡ್ಯ, ಹಾಸನ, ಬನ್ನೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಭದ್ರಾವತಿ, ಹುಬ್ಬಳ್ಳಿ, ರಾಣಿ ಬೆನ್ನೂರು, ಗದಗ ಮತ್ತ್ತು ಗಂಗಾವತಿಯ ಊರುಗಳಲ್ಲಿ ಕನ್ನಡ ಚಿತ್ರ ಸಾರಥಿ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಂಡಿದೆ.

10:30 ನಂತರ ಸಮಾರಂಭವು ಆರಂಭಗೊಳ್ಳಲಿದೆ.  ಇದೇ ರೀತಿ ಎಲ್ಲಾ ಕನ್ನಡ ಚಿತ್ರಗಳು 100, 200, 300, 500 ದಿನಗಳನ್ನು ಪೂರೈಸಲಿ ಎಂದು ಹಾರೈಸುವ ಕನ್ನಡಹನಿಗಳ ಬಳಗ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech