Close X

CCL-T20ನಲ್ಲಿ ಕರ್ನಾಟಕ ಬುಲ್‍ಡೋಜರ್ಸ್‌ನ ಶುಭಾರಂಭ

CCL-T20-Karnataka-Bulldozers

ಕಿಚ್ಚ ಸುದೀಪ್ ಸಾರಥ್ಯದ ಕರ್ನಾಟಕ ಬುಲ್‌ಡೋಜರ್ಸ್ ತನ್ನಮೊದಲ ಪಂದ್ಯದಲ್ಲೇ ಭರ್ಜರಿ ಜಯ ಸಾಧಿಸಿದೆ. ಬೆಂಗಾಲ್ ಟೈಗರ್ಸ್‌, ಮೊದಲ ಬಾರಿಗೆ ccl-t20 ಆಡುತ್ತಿದ್ದು, ಕರ್ನಾಟಕ ಬುಲ್‍ಡೋಜರ್ಸ್‌ಗೆ ಸುಲಭದ ತುತ್ತಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಈ ಪಂದ್ಯ ಕರ್ನಾಟಕ ಬುಲ್‍ಡೋಜರ್ಸ್ ಬೆಂಗಾಲ್ ಟೈಗರ್ಸ್‌ನ್ನು 95 runs ನಿಂದ ಪರಾಭವಗೊಳಿಸಿದೆ.

ಟಾಸ್ ಗೆದ್ದು ಫೀಲ್‌ಡಿಂಗ್ ಆಯ್ದ ಬೆಂಗಾಲ್ ಟೈಗರ್ಸ್‌ಗೆ ಇದೇ ಮುಳ್ಳಾಯಿತು. ಕರ್ನಾಟಕದ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಕುಗ್ಗಿಹೋಯಿತು. ಭಾಸ್ಕರ್ ಮತ್ತು ರಾಜೀವ್ 2nd ವಿಕೆಟಿಗೆ 53 ಚೆಂಡುಗಳಲ್ಲಿ 100 runs ಕಲೆಹಾಕಿತು. ರಾಜೀವ್ 91 runs ಗಳಿಸಿ, ಸೆಂಚುರಿಯ ಹೊಸ್ತಿಲಲ್ಲಿ ಎಡವಿದರು. ಅವರು ಔಟಾದದ್ದು ದುರದೃಷ್ಟವೇ :(. ಭಾಸ್ಕರ್ ತಮ್ಮ ಮಂಡಿನೋವಿನಿಂದ ಬಳಲುತ್ತಿದ್ದರು, 40 ಚೆಂಡುಗಳಲ್ಲಿ 75 runs ಕಲೆಹಾಕಿ, ಕರ್ನಾಟಕದ ದೊಡ್ಡ ಮೊತ್ತಕ್ಕೆ ನೆರವಾದರು. ಇವರಿಬ್ಬರ ನಂತರ ಬಂದ ದೃವ 16 ಎಸೆತಗಳಲ್ಲಿ 41 runs ಹೊಡೆದರು.

ನಂತರ ಬಂದ ಬೆಂಗಾಲ್ ಟೈಗರ್ಸ್ ಮೊದಲಲ್ಲಿ ಬಾರಿ ವಿರೋಧವೊಡ್ಡಿದರು, ಕರ್ನಾಟಕದ ಬೌಲರ್‌ಗಳನ್ನು ಎದುರಿಸಲು ಅಸಾಧ್ಯವಾಯಿತು. 20 overs ಗಳನ್ನು ಪೂರ್ಣವಾಗಿ ಆಡಿ, 6 wicket ಕಳೆದುಕೊಂಡು 157 runs ಮಾಡಿದರು.

ಇದರೊಂದಿಗೆ ಕರ್ನಾಟಕ ಬಲಿಷ್ಟ ತಂಡವೆಂದು ಸಾಭೀತು ಪಡಿಸಿ, ಈ ಸಲದ ccl-t20 ಕಪ್‌ನ್ನು ತನ್ನದಾಗಿಸಿಕೊಳ್ಳಲೆಂದು ಹಾತೊರೆಯುತ್ತಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech