Close X

ಆರಕ್ಷಕ ಚಿತ್ರದ ನೀರೊಳಗಿನ ಹಾಡಿಗೆ ಉಪೇಂದ್ರರಿಂದ ಶಭಾಶ್ ಅನ್ನಿಸಿಕೊಂಡ ರಾಗಿಣಿ

arakshaka-kannada-movie-ragini-dwivediಆರಕ್ಷಕ ಚಿತ್ರದಲ್ಲಿ ನೀರಿನಲ್ಲಿ ಕುಣಿದಾಡುವ ಒಂದು ಹಾಡಿಗೆ ಉಪೇಂದ್ರರಿಂದ ಶಭಾಶ್ ಪಡೆದಿದ್ದಾರೆ ರಾಗಿಣಿ. ಚಿತ್ರದ ಹಾಡು ಬಹಳ ಸುಂದರವಾಗಿ ಬಂದಿದೆಯಂತೆ. ಉಪೇಂದ್ರರ ಪ್ರತಿಕ್ರಿಯೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದು, ಇದೊಂದು ಉತ್ತಮ ಅಭಿನಂದನೆ ಎಂದಿದ್ದಾರೆ. ಉಪೇಂದ್ರರಿಂದ ಶಭಾಶ್ ಅನ್ನಿಸಿಕೊಳ್ಳುವುದೇ ಒಂದು ದೊಡ್ಡ ಪ್ರಶಸ್ತಿ.

ಇದರೊಂದಿಗೆ ರಾಗಿಣಿ ಈ ಮೊದಲು ಅನು ಪ್ರಭಾಕರ್ ಇಂತಹ ಹಾಡಿಗೆ ಶಾಪ ಚಿತ್ರದಲ್ಲಿ ನೃತ್ಯ ಮಾಡಿದ್ದ ಸಾಲಿಗೆ ಸೇರಿದ್ದಾರೆ. ಕನ್ನಡ ಸಿನಿಮಾದಲ್ಲಿ ಅಂತಹ ಹೇಳುವಷ್ಟು ನಾಯಕಿಯರು ಇಂತಹ ಹಾಡಿಗೆ ನೃತ್ಯ ಮಾಡಿಲ್ಲ. ಇತ್ತೀಚೆಗೆ ಟೀನೇಜ್ ಚಿತ್ರದಲ್ಲಿ ನೀರೊಳಗಿನ ಹಾಡು…. “ಯೀ ವಯಸ್ಸೆ ಒಂತರ” ಚಿತ್ರೀಕರಣ ವಿಶ್ವ ದಾಖಲೆಯನ್ನು ಮಾಡಿದೆಯಂತೆ.

ಈ ಚಿತ್ರವು ಅತ್ಯುತ್ತಮವಾಗಿದ್ದು ನಮ್ಮ ಮನಸ್ಥಿತಿಯನ್ನು ಬೇರೆ ಪ್ರಪಂಚಕ್ಕೆ ಕೊಂಡೊಯ್ಯುವುದು. ಉಪೇಂದ್ರರ ಜೊತೆ ಕೆಲಸ ಮಾಡುವುದು ಕೇಕ್ ಮೇಲೆ ಐಸಿಂಗ್ ಮಾಡಿದ ರೀತಿಯದಾಗಿತ್ತು. ಅವರು ಬಹಳ ಸಹಕಾರಿಯಾಗಿದ್ದರು. ಆರಕ್ಷಕ ಚಿತ್ರವು ಬಹಳ ಕುತೂಹಲಕಾರಿಯಾಗಿದ್ದು, ಪ್ರೇಕ್ಷಕರಿಗೆ ತಮ್ಮ ಸಂಪೂರ್ಣ ಹಣಕ್ಕೆ ಉತ್ತಮ ಮನರಂಜನೆ ದೊರೆಯಲಿದೆ ಎಂದರು ರಾಗಿಣಿ. ಇದೊಂದು ಪಕ್ಕಾ ವಾಣಿಜ್ಯ ರೀತಿಯ ಚಿತ್ರವಾಗಿದೆ. ನನ್ನ ಪರಿಚಯದ ಹಾಡು ಚಿತ್ರದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಜನವರಿ 26 2012, ‘ಆರಕ್ಷಕ’ ಚಿತ್ರದ ಬೆಳಗ್ಗಿನ ಪ್ರದರ್ಶನಕ್ಕೆ ಕಾತುರದಿಂದಿದ್ದಾರೆ ರಾಗಿಣಿ.

ಚಿತ್ರದ ಮುಖ್ಯಭೂಮಿಕೆಯಲ್ಲಿ ಉಪೇಂದ್ರರ, ರಾಗಿಣಿಯ ಜೊತೆ ತಮಿಳಿನ ಸದಾ ಕೂಡ ನಟಿಸಿದ್ದಾರೆ. ಪಿ. ವಾಸು ಚಿತ್ರವನ್ನು ನಿರ್ದೇಶಿಸಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech