Close X

ಗೋಲ್ಡನ್ ಸ್ಟಾರ್ ಗಣೇಶ್‌ರ ಎರಡು ಚಿತ್ರಗಳು ಸಿದ್ದವಾಗಿದೆ

golden-star-ganesh-munjane-romeoಗೋಲ್ಡನ್ ಸ್ಟಾರ್ ಗಣೇಶ್‍ರ ಎರಡು ಚಿತ್ರಗಳು ರೋಮಿಯೋ ಮತ್ತು ಮುಂಜಾನೆ ಚಿತ್ರಗಳು ಏಕಕಾಲದಲ್ಲಿ ಸಿದ್ದವಾಗಿದೆ. ಮುಂಜಾನೆ ಚಿತ್ರದ ದ್ವನಿಸುರಳಿಯನ್ನು ಇದೇ ಸಂಕ್ರಾಂತಿಯಂದು ಬಿಡುಗಡೆ ಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸಮೇತ ಮುಂಜಾನೆ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದರು. ಅಂಬರೀಷ್ ತಮ್ಮ ಭಾಷಣದಲ್ಲಿ ಎಸ್. ನಾರಾಯಣ್‌ರ ಗುಣಗಳನ್ನು  ವರ್ಣಿಸಲು ಪದಗಳೇ ಸಿಗದು ಎಂದು ಹೇಳಿದ್ದರು.

ಮುಂಜಾನೆ ಚಿತ್ರವು ನಿರ್ದೇಶಕ ಎಸ್. ನಾರಾಯಣ್ ಬ್ಯಾನರ್‌ನಡಿಯಲ್ಲಿ ತಯಾರಾಗಿದೆ. ಇದೇ ಫೆಬ್ರವರಿಯಂದು ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮಂಜರಿ ಫಡ್‍ನೀಸ್ ನಟಿಸಿರುವ ಮುಂಜಾನೆ ಚಿತ್ರವು ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳಲಿದೆಯಂತೆ.

ಮತ್ತೊಂದು ಚಿತ್ರ ರೋಮಿಯೋ ಕೂಡ ತನ್ನ 65 ದಿನಗಳ ಶೂಟಿಂಗ್ ಮುಗಿಸಿದ್ದು ದ್ವನಿಸುರಳಿ ಬಿಡುಗಡೆಗೆ ಮುಂದಿನ ತಿಂಗಳು ಫೆಬ್ರವರಿಯಲ್ಲಿ ನಡೆಯಲಿದೆ.  ಈ ಚಿತ್ರವನ್ನು ಕೆ. ಎಸ್. ಪಿಕ್ಚರ್ಸ್ ತಯಾರಿಸುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಭಾವನ ಮುಖ್ಯಭೂಮಿಕೆಯಲ್ಲಿದ್ದಾರೆ.  ರೋಮಿಯೋ ಚಿತ್ರದ ನಿರ್ಮಾಪಕರು ನವೀನ್ ಮತ್ತು ರಮೇಶ್ ಕುಮಾರ್ ಮಾರ್ಚ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ರೋಮಿಯೋ ಚಿತ್ರಕ್ಕೆ ಪಿ. ಸಿ. ಶೇಖರ್‌ರವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನ, ನಟರಾಜ್‌ರ ಸಂಭಾಷಣೆ ಮತ್ತು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ರಂಗಾಯಣ ರಘು, ಅವಿನಾಶ್, ಸಾಧು ಕೋಕಿಲ, ರಮೇಶ್ ಭಟ್, ಮಿತ್ರ, ಸುಧಾ ಬೆಳವಾಡಿ ಮುಂತಾದವರು ಚಿತ್ರದ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech