Close X

ಉಪೇಂದ್ರ ಹದಿಮೂರು ವರ್ಷಗಳ ನಂತರ ಪೋಲೀಸ್ ಗೆಟಪ್‌ನಲ್ಲಿ !

arakshaka-kannada-movie-upendraಉಪೇಂದ್ರ ಹದಿಮೂರು ವರ್ಷಗಳ ನಂತರ ಪೋಲೀಸ್ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಪೇಂದ್ರರ ಆರಕ್ಷಕ ಚಿತ್ರದ ಕೆಲವು ದೃಶ್ಯಗಳಲ್ಲಿ ಪೋಲೀಸ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮದೇ ನಿರ್ದೇಶನದ “ಶ್….” ಚಿತ್ರದ ಒಂದು ದೃಶ್ಯದಲ್ಲಿ ಪೋಲೀಸ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಇದು ಹದಿಮೂರು ವರ್ಷಗಳ ಹಿಂದೆ ಬಂದ ಚಿತ್ರ. ಈ ಮಧ್ಯೆ ನಿರ್ಮಾಪಕ ಮುನಿರತ್ನ ನಾಯ್ಡು ‘ಕಲ್ಕಿ’ ಚಿತ್ರದಲ್ಲಿ ಉಪೇಂದ್ರರಿಗೆ ಪೋಲೀಸ್ ಪಾತ್ರ ಕೊಟ್ಟಿದ್ದರು. ಇದು ಮುಹೂರ್ತದ ನಂತರ ಚಿತ್ರೀಕರಣಕ್ಕೆ ಹೋಗಲೆ ಇಲ್ಲ. :(

ಉಪೇಂದ್ರ ಅವರು ತಮ್ಮ ಗಡ್ಡ ಮತ್ತು ಉದ್ದನೆಯ ಕೂದಲು ಕತ್ತರಿಸಿ ಕ್ಷೌರ ಮಾಡಲು ಆತಂಕಕ್ಕೆ ಒಳಗಾಗಿದ್ದರು. ಇದು ನಿರ್ದೇಶಕ ಪಿ. ವಾಸುರವರ ಆಯ್ಕೆಯಲ್ಲದಿದ್ದರೂ, ಪೋಲೀಸ್ ಪಾತ್ರ ಅದನ್ನು ಕೇಳುತ್ತದೆ ಎಂದರು ಉಪೇಂದ್ರ.  ನಾನು ವೀಕ್ಷಕನಾಗಿ ಚಿತ್ರವನ್ನು ನೋಡಿದ್ದೀನಿ. ಚಿತ್ರದ ವಿಷಯವನ್ನು ನಿಭಾಯಿಸಿದ್ದೇನೆ ಎಂದು ಸಂತೋಷದ ವ್ಯಕ್ತಪಡಿಸಿದರು. ಇದು ಜಟಿಲ ಮತ್ತು ವೇಗದ ಗತಿಯ ನಿರೂಪಣೆಯು ಆಗಿದೆ. ನಾನು ಮಾಡಿದ ನಟನೆಯ ಕ್ರೆಡಿಟ್ ನಿರ್ದೇಶಕ ಪಿ ವಾಸುಗೆ ಸಲ್ಲಬೇಕು ಎಂದು ಉಪೇಂದ್ರ ಹೇಳುತ್ತಾರೆ.

ನನ್ನ ಮತ್ತು ಗುರುಕಿರಣ್‌ರ ಯಶಸ್ಸು ಹದಿಮೂರು ವರ್ಷಗಳ ಹಿಂದೆ “A” ಚಿತ್ರದ ಮೂಲಕ ಬಂದಿತ್ತು. ಈ ಚಿತ್ರ ಕೂಡ ನಾನು ಮತ್ತು ಗುರುಕಿರಣ್ ಮತ್ತೊಂದು “A” ಚಿತ್ರದಂತಹ ಯಶಸ್ಸಾಗಲೆಂದು ಬಯಸುತ್ತೇನೆ. “A” ಚಿತ್ರವು 23 ನೇ ಜನವರಿ 1998ರಲ್ಲಿ ಬಿಡುಗಡೆಯಾಗಿತ್ತು –  ಹದಿಮೂರು ವರ್ಷ ೩ ದಿನಗಳ ನಂತರ “A”  ಅಕ್ಷರದಿಂದ ಶುರುವಾಗುವ “ಆರಕ್ಷಕ” ಚಿತ್ರವು ಬಿಡುಗಡೆಯಾಗುತ್ತಿದೆ ಎಂದು ಗುರುಕಿರಣ್ ಹೇಳಿದರು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech