Close X

ಬೋಲ್ಟ್ ಹೊಸ ವಿಶ್ವ ದಾಖಲೆ: 100 ಮೀ ಓಟವನ್ನು 9.58 ಸೆ. ಗಳಲ್ಲಿ

ವಿಶ್ವ ಅಥ್ಲೆಟಿಕ್ಸ್ : ’9.4 ಸೆಕೆಂಡುಗಳಲ್ಲಿಯೂ ಓಡಬಲ್ಲೆ’

Usain-Boltಭಾನುವಾರ ರಾತ್ರಿ ಬರ್ಲಿನ್‍ನ ಒಲಂಪಿಕ್ ಕ್ರೀಡಾಂಗಣದಲ್ಲಿ ನಡೆದ ಪುರುಷರ 100 ಮೀಟರ್ ಓಟದಲ್ಲಿ ಜಮೈಕಾದ ಅಥ್ಲೀಟ್ ಉಸೇನ್ ಬೋಲ್ಟ್ ಮತ್ತೊಂದು ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ.

ಬೋಲ್ಟ್ ಬರ್ಲಿನ್‍ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಷಿಪ್‍ನ ಪುರುಷರ ೧೦೦ ಮೀಟರ್ ಓಟವನ್ನು 9.58 ಸೆ. ಗಳಲ್ಲಿ ಕ್ರಮಿಸಿ ತಾವೇ ಒಂದು ವರ್ಷದ ಹಿಂದೆ ಚೀನಾದ ರಾಜಧಾನಿ ಬೀಜಿಂಗ್‍ನಲ್ಲಿ ನಡೆದ ಒಲಂಪಿಕ್ ಕೂಟದಲ್ಲಿ 9.69ಸೆ. ನೊಂದಿಗೆ ಸ್ಥಾಪಿಸಿದ್ಧ ದಾಖಲೆಯನ್ನು ಉತ್ತಮ ಪಡಿಸಿಕೊಂಡರು.

ಅಮೇರಿಕದ ಟೈಸನ್ ಗೇ ಅವರು 9.71 ಸೆ. ನೊಂದಿಗೆ ಬೆಳ್ಳಿ ಪದಕ ಗೆದ್ದರೆ, ಜಮೈಕಾದವರೇ ಆದ ಅಸಫಾ ಪೋವೆಲ್ ಅವರು ೯.೮೪ ಸೆ. ನೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಬಹುಷಃ 9.4ಸೆ. ಗಳಲ್ಲಿ ದೂರವನ್ನು ಕ್ರಮಿಸಿ ಮತ್ತೊಂದು ದಾಖಲೆಯನ್ನು ನಿರ್ಮಿಸುತ್ತೇನೆ ಎಂದು ಪ್ರತಿಕ್ರಿಯಿಸಿದ ಬೋಲ್ಟ್, ಅದಕ್ಕಾಗಿ ಓಡುತ್ತಲೇ ಇರುತ್ತೇನೆ ಎಂದರು.

ಇಪ್ಪತ್ತೆರಡು ವರ್ಷ ವಯಸ್ಸಿನ ಬೋಲ್ಟ್, ವಿಶ್ವ ದಾಖಲೆಗಾಗಿ ನಾನು ಓಡುವುದಿಲ್ಲ, ನನ್ನ ಉದ್ದೇಶ ಕೇವಲ ಓಡುವುದಾಗಿದೆ, ಭಾರಿ ಪೈಪೋಟಿಯಿಂದ ಕೂಡಿದ ಓಟವಾಗಿ ಪರಿಣಮಿಸುತ್ತದೆ ಎಂದು ಭಾವಿಸಿದ್ದೇ, ಅದೇ ರೀತಿ ಆಯಿತು. ಆದರೆ ನನಗೆ ಸಿಕ್ಕ ಒಂದು ಪ್ಲಸ್ ಪಾಯಿಂಟ್ ಎಂದರೆ ಉತ್ತಮ ಆರಂಭ ಪಡೆದರೆ, ಅರ್ಧ ಓಟ ಗೆದ್ದಂತೆ, ಮೊದಲ ಇಪ್ಪತ್ತು ಮೀಟರ್ ನಂತರ ದಾಖಲೆ ಮಾಡುತ್ತೇನೆ ಎನ್ನುವ ವಿಶ್ವಾಸ ಮೂಡಿತ್ತು ಎಂದು ಹೇಳಿದರು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech