Close X

ರಾಧಿಕಾ ನಿನ್ನ ಮಹಿಮೆಯಿದೇನೇ……

Radhika Pandit
Radhika Pandit

ರಾಧಿಕಾ ಪಂಡಿತ್ ಮೊದಲ ಬಾರಿಗೆ ಬಣ್ಣ ಹಚ್ಚಿದ ಚಿತ್ರ, ಈಗ ನಾಲ್ಕನೆಯ ಚಿತ್ರವಾಗಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಹೌದು. ರಾಧಿಕಾ ಕೆಲವು ವರ್ಷಗಳ ಹಿಂದೆ ’೧೮ಥ್ ಕ್ರಾಸ್’ ಎಂಬ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಅದವರ ಮೊದಲನೆಯ ಚಿತ್ರವಾಗಿತ್ತು. ಚಿತ್ರೀಕರಣ ಮುಗಿಯಿತಾದರೂ, ಮಿಕ್ಕ ಕೆಲಸ ಮುಗಿಯುವಷ್ಟರಲ್ಲಿ ಚಿತ್ರದ ನಿರ್ಮಾಪಕ ಚಿಕ್ಕಣ್ಣ ತೀರಿಕೊಂಡರು.

ಇನ್ನು ಚಿತ್ರ ಬಿಡುಗಡೆಯಾಗುವುದು ಸಂಶಯ ಎಂದು ಎಲ್ಲರೂ ಭಾವಿಸಿರುವಾಗಲೇ, ’ದುನಿಯಾ’ ನಿರ್ಮಾಪಕ ಟಿ. ಪಿ. ಸಿದ್ಧರಾಜು ಚಿತ್ರತಂಡ ದ ಕೈ ಹಿಡಿದಿದ್ದಾರೆ. ತಾವೇ ಮುಂದೆ ನಿಂತು ಚಿತ್ರ ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರಂತೆ. ಅಲ್ಲಿಗೆ ನಿಂತೇ ಹೋಯಿತು ಎನ್ನುವ ಚಿತ್ರಕ್ಕೆ ಮತ್ತೆ ಚಾಲನೆ ಸಿಕ್ಕಿದೆ.

ಇದು ರಾಧಿಕಾ ಮಹಿಮೆ ಎಂದರೆ ತಪ್ಪಲ್ಲ.  ಏಕೆಂದರೆ, ಆ ಚಿತ್ರದ ನಾಯಕ ದೀಪಕ್ ಸದ್ಯಕ್ಕೆ ಬೇಡಿಕೆಯಿಲ್ಲದ ನಟ. ಇನ್ನು ನಿರ್ದೇಶಕರು, ಮಿಕ್ಕ ತಂತ್ರಜ್ಞರು ಎಲ್ಲರೂ ಹೊಸಬರು. ಅಷ್ಟಾದರೂ ಚಿತ್ರ ಪ್ರಾರಂಭವಾಗಿದೆ ಎಂದರೆ ಅದಕ್ಕೆ ಕಾರಣ ರಾಧಿಕಾ ಪಂಡಿತ್.

ರಾಧಿಕಾ ಗೆಲ್ಲುವ ಕುದುರೆಯಲ್ಲಿದಿದ್ದರೂ, ತಮ್ಮ ಪ್ರಬುದ್ಧ ಅಭಿನಯದಿಂದ ಸಾಕಷ್ಟು ಹೆಸರು ಮಾಡಿಕೊಂಡಿದ್ದಾರೆ. ಅಭಿಮಾನಿ ವರ್ಗವನ್ನು ಕಟ್ಟಿಕೊಂಡಿದ್ದಾರೆ. ಜನ ಏನಾದರೂ ಬರುವುದಿದ್ದರೆ ಅದು ರಾಧಿಕಾ ಮುಖ ನೋಡಿಕೊಂಡು ಎಂಬುದು ಸುಳ್ಳಲ್ಲ. ಅದೇ ಕಾರಣಕ್ಕೆ ಸಿದ್ಧರಾಜು ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ ಎನ್ನುತ್ತಿದೆ ಗಾಂಧಿನಗರ.

ಏನಾದರಾಗಲೀ, ’೧೮ನೇ ಕ್ರಾಸ್’ಗೆ ಕೊನೆಗೂ ಬಿಡುಗಡೆಯ ಭಾಗ್ಯ ಬಂದೊದಗಿದೆ. ಆಕೆಯ ಅಭಿಮಾನಿಗಳು, ’ರಾಧಿಕೆ ನಿನ್ನ ಮಹಿಮೆ ಇದೇನೇ….’ ಎಂದು ಹಾಡಲಡ್ಡಿಯಿಲ್ಲ.

(ಕನ್ನಡಪ್ರಭ ವಾರ್ತೆ)

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech