Close X

ಕಾಂಗ್ರೆಸ್ – ಬಿಜೆಪಿ ಪ್ರತಿಷ್ಠೆ ಪಣಕ್ಕೆ

ಉಪ ಚುನಾವಣೆ ನಡೆಯುತ್ತಿರುವ ಐದು ಸ್ಥಳಗಳಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ. ಬಿಜೆಪಿ, ’ಆಪರೇಷನ್ ಕಮಲ’ವನ್ನು ಸಮರ್ಥಿಸುವ ಫಲಿತಾಂಶಕ್ಕಾಗಿ ಸೆಣಸುತ್ತಿದೆ. ಆದರೆ ಕಾಂಗ್ರೆಸ್-ಜೆಡಿಎಸ್, ಸಂಘಟಿತ ಹೋರಾಟಕ್ಕೆ ಇಳಿದು ಬಿಜೆಪಿಯ ಪಕ್ಷದ ಎದೆಯಲ್ಲಿ ನಡುಕ ಹುಟ್ಟಿಸಿವೆ.

ಮತದಾರರ ಸಂಖ್ಯೆ
ಪುರುಷರು 1,48,660
ಮಹಿಳೆಯರು 1,29,446
ಒಟ್ಟು: 2,78,106
ಒಟ್ಟು ಮತಗಟ್ಟೆಗಳು : 217

Govindarajanagarಗೋವಿಂದರಾಜನಗರ ಸಭಾ ಕ್ಷೇತ್ರದಲ್ಲಿ ಮಾತ್ರ ನೇರ ಹಣಾ ಹಣಿಯನ್ನು ಕಾಣಬಹುದಾಗಿದೆ. ಇತ್ತೀಚೆಗೆ ಬಿಜೆಪಿಗೆ ಜಿಗಿದು ಸಚಿವರಾಗಿ, ಅದೃಷ್ಟ ಪರೀಕ್ಷೆಗೆ ನಿಂತಿರುವ ಅನುಭವಿ ರಾಜಕಾರಣಿ ವಿ. ಸೋಮಣ್ಣ ಈಗಷ್ಟೇ ರಾಜಕೀಯಕ್ಕೆ ಧುಮುಕಿರುವ ಕಾಂಗ್ರೆಸ್‍ನ ಪ್ರಿಯಕೃಷ್ಣ ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ.

ಕ್ಷೇತ್ರ ಪುನರ್‌ವಿಂಗಡಣೆಯ ಬಳಿಕ ಎರಡನೇ ಬಾರಿಗೆ ಇಲ್ಲಿ ಚುನಾವಣೆ ನಡೆಯುತ್ತಿದೆ. ೨೦೦೮ರ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದ ಸೋಮಣ್ಣ ಈಗ ಬಿಜೆಪಿ ಅಭ್ಯರ್ಥಿ.

ಬಿಜೆಪಿಗೆ ಅಗ್ನಿಪರೀಕ್ಷೆ. ಹಾಲಿ ಸಚಿವರನ್ನೇ ಕಣಕ್ಕಿಳಿಸಿರುವ ಆಡಳಿತ ಪಕ್ಷ, ಗೆಲ್ಲಲೇಬೇಕಾದ ಅನಿವಾರ್ಯತೆ ಹೊಂದಿದೆ.

ಆದರೆ ನೇರ ಸ್ಪರ್ಧೆಯಿಂದ ಇಕ್ಕಟ್ಟಿಗೆ ಸಿಲುಕಿರುವ ಬಿಜೆಪಿ ’ಜಾತ್ಯತೀತ’ ನೆಲೆಯ ಮತಗಳನ್ನೂ ಕಸಿಯಲು ಪ್ರಯತ್ನಿಸುತ್ತಿದೆ.

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಅವರಿಗೆ ಇದು ಮೊದಲ ಚುನಾವಣೆ. ಕಾಂಗ್ರೆಸ್‍ನ ಬಹುತೇಕ ನಾಯಕರು ಕ್ಷೇತ್ರದಲ್ಲೇ ಠಿಕಾಣಿ ಹೂಡಿರುವುದು ಅವರ ಬಲವನ್ನು ಹೆಚ್ಚಿಸಿದೆ. ಅದರ ಜೊತೆಯಲ್ಲೇ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಿರುವುದು ಇಲ್ಲಿನ ಫಲಿತಾಂಶ ಕುರಿತಂತೆ ಕೆಲ ದಿನಗಳ ಹಿಂದೆ ಇದ್ದ ಲೆಕ್ಕಾಚಾರವನ್ನು ಬದಲಿಸಿದೆ.

somannapriyakrishnaಅದೇನೇ ಇರಲಿ, ಗೋವಿಂದರಾಜನಗರ ಕ್ಷೇತ್ರ ಕಾಂಗ್ರೆಸ್ ಹಾಗೂ ಬಿಜೆಪಿಗಷ್ಟೇ ಅಲ್ಲ; ಸೋಮಣ್ಣ ಹಾಗೂ ಎಂ. ಕೃಷ್ಣಪ್ಪ ಅವರ ’ಪ್ರತಿಷ್ಠೆ’ಯನ್ನು ಒರೆಗೆ ಹಚ್ಚಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech